ಚೀನಾ: 2029ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. ಸಾಕಷ್ಟು ಸಾವು ನೋವುಗಳು ಈ ವೈರಸ್‌ನಿಂದ ಸಂಭವಿಸಿತ್ತು. ಇದೀಗ ಚೀನಾದಲ್ಲಿ ಮತ್ತೊಂದು ಮಹಾಮಾರಿ ವೈರಸ್ ಪತ್ತೆಯಾಗಿದೆ.
ಇದು ಬಾವಲಿ ಮೂಲಕ ಮನುಷ್ಯರಿಗೆ ಹರಡುವ ಎಚ್‌ಕೆಯು5-ಸಿಒವಿ-2 ಎಂಬ ವೈರಾಣು. ಈ ವೈರಸ್ ಮೆರ್ಬೆಕೊವೈರಸ್ ಉಪಜಾತಿಗೆ ಸೇರಿದ ಕೊರೊನಾ ವೈರಸ್ ಆಗಿದ್ದು, ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್‌ಗೆ ಕಾರಣವಾಗುವ ವೈರಸ್ ಒಳಗೊಂಡಿದೆ ಎನ್ನಲಾಗಿದೆ.
ಕೋವಿಡ್ 19 ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ವೈರಸ್‌ನಂತೆಯೇ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಅಪಾಯವನ್ನು ಹೊಂದಿದೆ. ಮಾನವನ ಉಸಿರಾಟ ವ್ಯವಸ್ಥೆ ಮೇಲೆ ಪರಿಣಾಮ ಬೀರಬಲ್ಲದ್ದಾಗಿದೆ ಎಂದು ಹೇಳಲಾಗಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ , ಎಚ್‌ಕೆಯು5-ಸಿಒವಿ-2 ಎಂಬ ಹೊಸ ವೈರಸ್ ಅನ್ನು ಬ್ಯಾಟ್‌ವುಮನ್ ಎಂದು ಕರೆಯಲ್ಪಡುವ ಪ್ರಸಿದ್ಧ ವಿಜ್ಞಾನಿ ಶಿ ಝೆಂಗ್ಲಿ ನೇತೃತ್ವದ ವೈರಾಲಜಿಸ್ಟ್‌ಗಳ ತಂಡವು ಕಂಡುಹಿಡಿದಿದೆ. ಹೊಸ ವೈರಸ್ ಎಸ್‌ಎಆರ್‌ಎಸ್ ಸಿಒವಿ-2 ಗೆ ಹೋಲಿಕೆಯನ್ನು ಹೊಂದಿದೆ ಎಂದು ಚೀನಾದ ಸಂಶೋಧಕರು ಕಂಡುಕೊಂಡಿದ್ದಾರೆ.
ಎಚ್‌ಕೆಯು5-ಸಿಒವಿ-2 ಎಂಬುದು ಮೆರ್ಬೆಕೊವೈರಸ್ ಉಪಜಾತಿಗೆ ಸೇರಿದ ಕೊರೊನಾವೈರಸ್ ಆಗಿದ್ದು, ಇದು ಉಸಿರಾಟದ ಸಿಂಡ್ರೋಮ್ ಗೆ ಕಾರಣವಾಗುವ ವೈರಸ್ ಅನ್ನು ಸಹ ಒಳಗೊಂಡಿದೆ. ಪ್ರಯೋಗಾಲಯ ಪರೀಕ್ಷೆಯ ಸಮಯದಲ್ಲಿ, ವಿಜ್ಞಾನಿಗಳು ಬಳಸಿದ ಮಿನಿ-ಮಾನವ ಅಂಗ ಮಾದರಿಗಳಲ್ಲಿ ಎಚ್‌ಕೆಯು5-ಸಿಒವಿ-2 ಮಾನವ ಜೀವಕೋಶಗಳಿಗೆ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಂಡವು ಕಂಡುಹಿಡಿದಿದೆ.