ನ್ಯೂಯಾರ್ಕ್: ಅಮೆರಿಕಾದಲ್ಲಿ ತಮ್ಮನ್ನು ಭೇಟಿಯಾದ ಭಾರತೀಯ ಪ್ರಧಾನಿ ನರೇಂದ್ರ ಮೋದಿಗೆ ನಿಮ್ಮ ನೆರೆಯ ಬಾಂಗ್ಲಾದೇಶವನ್ನು ನೀವೇ ನೋಡಿಕೊಳ್ಳಿ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ಯಾಕೆ ಎಂದು ಈಗ ಚರ್ಚೆಯಾಗುತ್ತದೆ.
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನವಾದ ಬಳಿಕ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಹಿಂದೂಗಳ ಮಾರಣ ಹೋಮ ನಡೆದರೂ ಕೇಳುವವರಿಲ್ಲ ಎಂಬ ಪರಿಸ್ಥಿತಿಯಿದೆ.
ಈ ನಡುವೆ ಬಾಂಗ್ಲಾದೇಶದ ಬಿಕ್ಕಟ್ಟಿನಲ್ಲಿ ಅಮೆರಿಕಾದಲ್ಲಿ ಈ ಮೊದಲು ಆಡಳಿತದಲ್ಲಿದ್ದ ಜೋ ಬೈಡನ್ ಸರ್ಕಾರದ ಕೈವಾಡವಿತ್ತು ಎಂದು ಈ ಮೊದಲು ಗುಸು ಗುಸು ಕೇಳಿಬಂದಿತ್ತು. ಆದರೆ ಈಗ ಡೊನಾಲ್ಡ್ ಟ್ರಂಪ್ ಬಾಂಗ್ಲಾದೇಶವನ್ನು ನೀವೇ ನೋಡಿಕೊಳ್ಳಿ ಎಂದಿದ್ದು ಮಹತ್ವ ಪಡೆದುಕೊಂಡಿದೆ.
ಬಾಂಗ್ಲಾದೇಶ ಬಿಕ್ಕಟ್ಟಿನಲ್ಲಿ ಅಮೆರಿಕಾ ಹಸ್ತಕ್ಷೇಪವಿಲ್ಲ. ಈ ವಿಷಯವನ್ನು ಪ್ರಧಾನಿ ಮೋದಿ ನಿರ್ವಹಿಸುತ್ತಾರೆ. ನಾನು ಬಾಂಗ್ಲಾದೇಶವನ್ನು ಮೋದಿಗೆ ಬಿಟ್ಟುಬಿಡುತ್ತೇನೆ ಎಂದಿದ್ದಾರೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಡೊನಾಲ್ಡ್ ಟ್ರಂಪ್ ಬಾಂಗ್ಲಾದೇಶಕ್ಕೆ ನೀಡುತ್ತಿದ್ದ ಎಲ್ಲಾ ಸಹಾಯವನ್ನೂ ನಿಲ್ಲಿಸಿತ್ತು. ಈಗ ಮೋದಿಗೆ ನೀವೇ ಬಾಂಗ್ಲಾದೇಶವನ್ನು ನೋಡಿಕೊಳ್ಳಿ ಎಂದಿರುವುದು ಈ ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ.