Select Your Language

Notifications

webdunia
webdunia
webdunia
webdunia

ಅಮೆರಿಕಾದಿಂದ ಹೊರಡುವ ಮೊದಲು ಗೆಳೆಯ ಮೋದಿಗೆ ಡೊನಾಲ್ಡ್ ಟ್ರಂಪ್ ನೀಡಿದ ವಿಶೇಷ ಉಡುಗೊರೆ

Donald Trump-Modi

Krishnaveni K

ನ್ಯೂಯಾರ್ಕ್ , ಶುಕ್ರವಾರ, 14 ಫೆಬ್ರವರಿ 2025 (09:50 IST)
Photo Credit: X
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸಾಗುತ್ತಿದ್ದಾರೆ. ಭಾರತಕ್ಕೆ ಮರಳುವ ಮುನ್ನ ಮೋದಿಗೆ ಗೆಳೆಯ ಟ್ರಂಪ್ ಕಡೆಯಿಂದ ವಿಶೇಷ ಉಡುಗೊರೆಯೊಂದು ಸಿಕ್ಕಿದೆ.

ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿದ ಬಳಿಕ ಮೋದಿ ಮೊದಲ ಬಾರಿಗೆ ಭೇಟಿಯಾಗುತ್ತಿದ್ದಾರೆ. ಕಳೆದ ಬಾರಿ ಟ್ರಂಪ್ ಅಧ್ಯಕ್ಷರಾಗಿದ್ದ ಅಮೆರಿಕಾದಲ್ಲಿ ಮೋದಿಗಾಗಿ ಹೌಡೀ ಮೋದಿ ಕಾರ್ಯಕ್ರಮ ಮತ್ತು ಟ್ರಂಪ್ ಭಾರತಕ್ಕೆ ಭೇಟಿ ನೀಡಿದಾಗ ನಮಸ್ತೆ ಟ್ರಂಪ್ ಎಂದು ಕಾರ್ಯಕ್ರಮ ಆಯೋಜಿಸಿದ್ದರು.

ಇದೇ ಕಾರ್ಯಕ್ರಮದಲ್ಲಿ ತೆಗೆಸಿಕೊಂಡ ಸುಂದರ ಫೋಟೋವನ್ನೊಳಗೊಂಡ ‘ಅವರ್ ಜರ್ನಿ ಟುಗೆದರ್’ ಎನ್ನುವ ಪುಸ್ತಕವನ್ನು ಮೋದಿಗೆ ತಮ್ಮ ಹಸ್ತಾಕ್ಷರ ಸಮೇತ ನೀಡಿದ್ದಾರೆ ಟ್ರಂಪ್. ಇದರಲ್ಲಿ ತಮ್ಮದೇ ಕೈ ಬರಹದಲ್ಲಿ ಮಿಸ್ಟರ್ ಪ್ರೈಮ್ ಮಿನಿಸ್ಟರ್ ನೀವು ತುಂಬಾ ಗ್ರೇಟ್ ಎಂದು ಟ್ರಂಪ್ ಬರೆದಿದ್ದಾರೆ.

ಮೋದಿ-ಟ್ರಂಪ್ ಭೇಟಿ ವೇಳೆ ಉಭಯ ದೇಶಗಳ ನಡುವೆ ವ್ಯಾಪಾರ ಸಂಬಂಧ ವೃದ್ಧಿ, ರಷ್ಯಾ-ಉಕ್ರೇನ್ ಯುದ್ಧ ವಿಚಾರಗಳು ಚರ್ಚೆಗೆ ಬಂದಿವೆ. ಇಂದು ಮೋದಿ ಭಾರತಕ್ಕೆ ವಾಪಸಾಗುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಚಲಾಯಿಸುತ್ತಾ ಕಚೇರಿ ಕೆಲಸ ಮಾಡುತ್ತಿದ್ದ ಮಹಿಳೆ: ಮುಂದೇನಾಯ್ತು ನೋಡಿ