ನ್ಯೂಯಾರ್ಕ್: ಅಮೆರಿಕಾ ಪ್ರವಾಸದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಪ್ರಧಾನಿ ಮೋದಿ ಭೇಟಿ ಮಾಡಿದ್ದು, ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಸಹಿ ಹಾಕುವಾಗ ಟ್ರಂಪ್ ಸ್ವತಃ ತಾವೇ ಕುರ್ಚಿ ಸರಿಸಿ ಕೊಟ್ಟ ವಿಡಿಯೋ ಈಗ ವೈರಲ್ ಆಗಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಮೇಲೆ ವಿಶೇಷ ಗೌರವವಿದೆ. ಈ ಹಿಂದೆ ಅಧ್ಯಕ್ಷರಾಗಿದ್ದಾಗಲೂ ಮೋದಿ ಜೊತೆ ಟ್ರಂಪ್ ಸ್ನೇಹ ಸಂಬಂಧವಿತ್ತು. ಇದಕ್ಕೆ ನಮಸ್ತೆ ಟ್ರಂಪ್ ಮತ್ತು ಹೌಡಿ ಮೋದಿ ಕಾರ್ಯಕ್ರಮಗಳು ಸಾಕ್ಷಿ.
ಉಭಯ ನಾಯಕರು ವಾಣಿಜ್ಯ ಒಪ್ಪಂದವೊಂದಕ್ಕೆ ಸಹಿ ಮಾಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಸಹಿ ಹಾಕುವಾಗಲೂ ಬೆನ್ನ ಹಿಂದೆ ನಿಂತಿದ್ದ ಡೊನಾಲ್ಡ್ ಟ್ರಂಪ್ ಏಳುವಾಗ ಕುರ್ಚಿ ಸರಿಸಿ ಸಹಾಯ ಮಾಡಿದ್ದಾರೆ.
ಟ್ರಂಪ್ ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಒಬ್ಬ ಭಾರತೀಯ ಪ್ರಧಾನಿಗೆ ಸಿಕ್ಕ ಗೌರವವಿದು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.