ಟೊರೆಂಟೊ: ಲ್ಯಾಂಡಿಂಗ್ ವೇಳೆ ವಿಮಾನ ಮಗುಚಿ ಬಿದ್ದು ಟೊರೆಂಟೊದಲ್ಲಿ ಭಾರೀ ಅನಾಹುತ ಸಂಭವಿಸಿದೆ. ಈ ಭಯಾನಕ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ಯಾಸೆಂಜರ್ ವಿಮಾನದಲ್ಲಿ ಸುಮಾರು 80 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ 18 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಸಾವಿನ ವರದಿಯಾಗಿಲ್ಲ.
ವಿಮಾನ ಸೀದಾ ಮೇಲು ಕೆಳಗಾಗಿದ್ದು, ಪ್ರಯಾಣಿಕರು ಕೈಗೆ ಸಿಕ್ಕಿದ್ದನ್ನು ಹಿಡಿದು ನೇತಾಡಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಬಳಿಕ ರಕ್ಷಣಾ ಸಿಬ್ಬಂದಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ದರು.
ಇನ್ನು, ಲ್ಯಾಂಡಿಗ್ ವೇಳೆ ದುರಂತ ಸಂಭವಿಸಿದ್ದರಿಂದ ಬೆಂಕಿಗೆ ಆಹುತಿಯಾಗುವ ಸಾಧ್ಯತೆಯಿದ್ದಿದ್ದರಿಂದ ತಕ್ಷಣವೇ ನೀರು ಹಾಯಿಸಿ ಬೆಂಕಿ ಹತ್ತಿಕೊಳ್ಳದಂತೆ ನೋಡಿಕೊಳ್ಳಲಾಯಿತು.