Select Your Language

Notifications

webdunia
webdunia
webdunia
webdunia

ಪ್ರೇಮಿಗಳ ದಿನ ನೆಪದಲ್ಲಿ ರಸ್ತೆಯಲ್ಲೇ ಯುವತಿಯರ ಜೊತೆ ಕಿಸ್ಸಿಂಗ್: ರೊಚ್ಚಿಗೆದ್ದ ವ್ಯಕ್ತಿ ಮಾಡಿದ್ದೇನು ವಿಡಿಯೋ ನೋಡಿ

teen boy kissik

Krishnaveni K

ಬೆಂಗಳೂರು , ಶನಿವಾರ, 15 ಫೆಬ್ರವರಿ 2025 (18:08 IST)
ಪ್ರೇಮಿಗಳ ದಿನವೆಂಬ ನೆಪದಲ್ಲಿ ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸಿ ಬೇರೆಯವರಿಗೆ ತೊಂದರೆ ಕೊಡುವ ಉದಾಹರಣೆಗಳಿವೆ. ಅದೇ ರೀತಿಯಲ್ಲಿ ಇಲ್ಲೊಬ್ಬ ವ್ಯಕ್ತಿ ರಸ್ತೆಯಲ್ಲೇ ಇಬ್ಬರು ಯುವತಿಯರಿಗೆ ಕಿಸ್ಸಿಂಗ್ ಮಾಡುತ್ತಿದ್ದ. ಇದನ್ನು ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು ಗಮನಿಸಿದ ವ್ಯಕ್ತಿಯೊಬ್ಬ ಒಂದು ಬಕೆಟ್ ನೀರು ಹೊಯ್ದು ಇಬ್ಬರನ್ನೂ ಓಡಿಸುವ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಸ್ತೆಯೆಂಬುದನ್ನೂ ಮರೆತು ಯುವಕ ಇಬ್ಬರು ಯುವತಿಯರೊಂದಿಗೆ ಅಸಭ್ಯ ವರ್ತನೆ ಮಾಡುತ್ತಿದ್ದ. ಒಬ್ಬಾಕೆಯನ್ನು ಎತ್ತಿ ಗರ ಗರನೆ ರಸ್ತೆಯಲ್ಲೇ ತಿರುಗಿಸಿ ಲಲ್ಲೆ ಹೊಡೆಯುತ್ತಿದ್ದ. ಇನ್ನೊಬ್ಬಾಕೆಗೂ ಮುತ್ತಿಕ್ಕುತ್ತಿದ್ದ.

ಈತನ ರಾಸಲೀಲೆಯನ್ನು ತನ್ನ ಮನೆಯಲ್ಲಿ ನಿಂತು ಗಮನಿಸಿದ ವ್ಯಕ್ತಿ ಅಲ್ಲಿಂದ ಜಾಗ ಖಾಲಿ ಮಾಡುವಂತೆ ಕೂಗಾಡಿದ್ದ. ಆದರೆ ಆತ ಏನೇ ಹೇಳಿದರೂ ಯುವಕನ ಸರಸ ಮುಂದುವರಿದೇ ಇತ್ತು.

ಇದರಿಂದ ಕೋಪಗೊಂಡ ವ್ಯಕ್ತಿ ಒಂದು ಬಕೆಟ್ ನೀರು ತಂದು ಬಾಲ್ಕನಿಯಿಂದಲೇ ಆ ಯುವಕನ ಮೇಲೆ ಸುರಿದಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿಯುವ ನೀರಿನಲ್ಲೂ ಕೇಂದ್ರದಿಂದ ನಮಗೆ ಅನ್ಯಾಯವಾಗಿದೆ: ಲೆಕ್ಕ ಕೊಟ್ಟ ಸಿಎಂ ಸಿದ್ದರಾಮಯ್ಯ