Select Your Language

Notifications

webdunia
webdunia
webdunia
webdunia

MLA ಪುತ್ರನಿಂದ ಅಶ್ಲೀಲ ಪದಗಳಿಂದ ನಿಂದನೆ, ಬೆದರಿಕೆ: ಡಿವೈಎಸ್‌ಪಿಗೆ ನೊಂದ ಅಧಿಕಾರಿಯಿಂದ ದೂರು

MLA Sangamesh Son Abuse

Sampriya

ಶಿವಮೊಗ್ಗ , ಮಂಗಳವಾರ, 11 ಫೆಬ್ರವರಿ 2025 (18:23 IST)
Photo Courtesy X
ಶಿವಮೊಗ್ಗ: ಕರ್ತವ್ಯದಲ್ಲಿದ್ದ ವೇಳೆ ಕಾಂಗ್ರೆಸ್ ಎಂಎಲ್ಎ ಪುತ್ರ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಗೆ ಹಾಕಿದ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಅಧಿಕಾರಿ ಜ್ಯೋತಿ ಅವರು ಭದ್ರಾವತಿಯಲ್ಲಿ ಡಿವೈಎಸ್ಪಿಗೆ ದೂರು ನೀಡಿದ್ದಾರೆ.

ಈ ಸಂಬಂದ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಪ್ರಕರಣ ಸಂಬಂಧ ದೂರು ದಾಖಲು ಮಾಡಿದ್ದೇನೆ. ಅವತ್ತು ದಾಳಿ ಮಾಡಿದಾಗ ಏನೇನು ಸಮಸ್ಯೆ ಆಗಿತ್ತೋ, ಆ ಬಗ್ಗೆ ದೂರು ನೀಡಿದ್ದೇನೆ.

ದಾಳಿ ಮಾಡಿದ ಸಂದರ್ಭದಲ್ಲಿ ನಮ್ಮ ಮೇಲೆ ಗಾಡಿ ಹತ್ತಿಸ್ರೋ ಎಂದೂ ಹೇಳುತ್ತಿದ್ದರು ಎಂದು ಹೇಳಿದ್ದಾರೆ.

ನನಗೆ ಆಗ ಭಯ ಆಯಿತು. ಪೋನ್ ಕಾಲ್ ಸಹ ಬಂತು ಯಾಕೋ ಸರಿಯಾಗುವುದಿಲ್ಲ ಎಂದು ವಾಪಾಸ್ ಬಂದೆ. ದಾಳಿ ವೇಳೆ ಬೆದರಿಕೆ ಸಹ ಬಂತು. ಈ ಸಂಬಂಧ ನನಗೆ ಅಧಿಕಾರಿಗಳು ಬೆಂಬಲ ನೀಡಿದ್ದಾರೆ ಎಂದು ಅಧಿಕಾರಿ ಜ್ಯೋತಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರಿಗೆ ರಕ್ಷಣೆಯಿಲ್ಲ - ಮಹಿಳಾ ಅಧಿಕಾರಿಗಳಿಗೆ ಗೌರವವಿಲ್ಲ, ಇದು ಕಾಂಗ್ರೆಸ್ ಸರ್ಕಾರದ ಮಹಿಳಾ ನೀತಿ