ಮೈಕ್ರೋಸಾಪ್ಟ್ ಕಂಪೆನಿಯ ಸಹ ಸಂಸ್ಥಾಪಕ ಪೌಲ್‌ ಅಲೆನ್‌ ನಿಧನ

ಬುಧವಾರ, 17 ಅಕ್ಟೋಬರ್ 2018 (15:08 IST)
ಸ್ಯಾನ್ ಫ್ರಾನ್ಸಿಸ್ಕೊ : ವಿಶ್ವದ ಬಹುದೊಡ್ಡ ಐಟಿ ಕಂಪೆನಿಗಳಲ್ಲೊಂದಾದ ಮೈಕ್ರೋಸಾಪ್ಟ್ ಕಂಪೆನಿಯ ಸಹ ಸಂಸ್ಥಾಪಕ ಪೌಲ್‌ ಅಲೆನ್‌ (65) ನಾನ್‌ ಹಾಡ್ಜ್ಕಿನ್ಸ್‌ ಲಿಂಫೋಮಾ (ಬಿಳಿ ರಕ್ತಕಣಗಳನ್ನು ಕೊಲ್ಲುವ ಕ್ಯಾನ್ಸರ್‌ ) ನಿಂದ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.


ಇವರು 1970ರ ದಶಕದಲ್ಲಿ ಬಿಲ್‌ ಗೇಟ್ಸ್‌ ಜತೆಗೂಡಿ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಹಾಗೇ ಸಿಯಾಟಲ್ ಸೀ ಹಾಕ್ಸ್, ಪೋರ್ಟ್ ಲ್ಯಾಂಡ್ ಟ್ರಯಲ್ ಬ್ಲೇಜರ್ಸ್ ಕ್ರೀಡಾ ತಂಡದ ಮಾಲೀಕರಾಗಿದ್ದರು


ಅನಂತರ ಇವರು ಹೂಡಿಕೆದಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಪಾಲ್‌ ಅಲೆನ್‌ ಬಂಡವಾಳ ಹೂಡಿರುವ ಸ್ಟ್ರಾಟೊಲಾಂಚ್‌ ಸಿಸ್ಟಂಸ್‌ ಎಂಬ ಸಂಸ್ಥೆ ವಿಶ್ವದ ಅತಿ ದೊಡ್ಡ ವಿಮಾನ ವಿನ್ಯಾಸಗೊಳಿಸಿದೆ. ಈ ವಿಮಾನ ರಾಕೆಟ್‌, ಬಾಹ್ಯಾಕಾಶ ನೌಕೆ ಉಡಾವಣೆ ಮಾಡಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪೋಷಕರಿಂದ ಡೆತ್ ನೋಟ್ ಬರೆಸಿಕೊಳ್ಳುತ್ತಿರುವ ವಾರ್ಡನ್ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ