ವಿಚಾರಣೆ ವೇಳೆ ಬಾಲಕಿ ಅತ್ತಿದ್ದಕ್ಕೆ ಜಡ್ಜ್ ಹೇಳಿದ್ದೇನು ಗೊತ್ತಾ?

ಮಂಗಳವಾರ, 16 ಅಕ್ಟೋಬರ್ 2018 (10:57 IST)
ಲಂಡನ್ : ಇಂಗ್ಲೆಂಡ್ ನ ನ್ಯಾಯಾಧೀಶರೊಬ್ಬರು ವಿಚಾರಣೆಯ ವೇಳೆ 14 ವರ್ಷದ ಬಾಲಕಿಯೊಬ್ಬಳಿಗೆ ಗುಡುಗಿದ ರೀತಿಯನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಜನರಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ.


ಮೊಬೈಲ್, ಸಿಮ್ ಕಾರ್ಡ್ ಗಳು, ಚಾರ್ಜರ್ ಗಳನ್ನು ಕದಿಯುತ್ತಿದ್ದ ಆರೋಪದ ಮೇಲೆ ಬಂಧಿತಳಾಗಿದ್ದ ನತಾಶಾ ಮೈರ್ ಎಂಬಾಕೆಯನ್ನು ಜಡ್ಜ್ ಸ್ಟೀಫನ್ ಜಾನ್ ಎಂಬುವರು ವಿಚಾರಣೆ ನಡೆಸುತ್ತಿದ್ದಾಗ  ಆರೋಪಿಯ ಮಗಳು ಭಯದಿಂದ ಅಳುತ್ತಿದ್ದಳು. ಇದರಿಂದ ಕೋಪಗೊಂಡ ಜಡ್ಜ್ ನೀನು ಹೀಗೆಯೇ ಅಳುತ್ತಿದ್ದರೆ, ನಿನಗೆ ಚಿಕ್ಕ ವಯಸ್ಸು ಎಂದೂ ನೋಡದೇ ಜೈಲಿಗಟ್ಟುತ್ತೇನೆ ಎಂದು ಸಿಟ್ಟಿನಿಂದ ಹೇಳಿದ್ದಾರೆ.


ಈ ವಿಚಾರಣೆಯ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಒಬ್ಬ ಜಡ್ಜ್ ಆಗಿ ಬಾಲಕಿಗೆ ಈ ರೀತಿ ಹೇಳಿದ್ದಕ್ಕೆ ಜನರು ಮಾತ್ರವಲ್ಲ ಹಲವು ನ್ಯಾಯಾಧೀಶರೂ  ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.   


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ಸದ್ಯಕ್ಕಿಲ್ಲ?