Publish Date: Mon, 01 Oct 2018 (09:31 IST)
Updated Date: Mon, 01 Oct 2018 (09:32 IST)
ಮುಂಬೈ: ಇಂಗ್ಲೆಂಡ್ ನಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಹೀನಾಯವಾಗಿ ಸೋತಿದ್ದಕ್ಕೆ ಬಿಸಿಸಿಐ ವಿವರಣೆ ಕೇಳಿತ್ತು. ಆದರೆ ಕೋಚ್ ರವಿಶಾಸ್ತ್ರಿ ಇದಕ್ಕೆ ಕೊಟ್ಟ ಕಾರಣ ನೋಡಿದರೆ ಅಚ್ಚರಿಯಾದೀತು.
ಏಷ್ಯಾ ಕಪ್ ಮುಗಿಸಿದ ಬಳಿಕ ತವರಿಗೆ ಬಂದಿಳಿದ ಕೋಚ್ ರವಿಶಾಸ್ತ್ರಿ ಇದೀಗ ಬಿಸಿಸಿಐ ಅಧಿಕಾರಿಗಳನ್ನು ಭೇಟಿ ಮಾಡಿ ಸೋಲಿಗೆ ಕಾರಣ ವಿವರಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅವರು ಇಂಗ್ಲೆಂಡ್ ನಲ್ಲಿ ಟಾಸ್ ಸೋತಿದ್ದೇ ಸರಣಿ ಸೋಲಿಗೆ ಕಾರಣವಾಯಿತು. ನಮ್ಮ ಆಟಗಾರರು ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಟಾಸ್ ಗೆಲ್ಲದೇ ಇರುವ ಕಾರಣ ಪರಿಸ್ಥಿತಿ ನಮಗೆ ಬೇಕಾದಂತೆ ಇರಲಿಲ್ಲ. ಸೋಲಿಗೆ ನಮ್ಮ ಆಟಗಾರರ ತಪ್ಪು ಏನೂ ಇರಲಿಲ್ಲ ಎಂದು ಪಿಳ್ಳೆ ನೆವ ಕೊಟ್ಟಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.