Publish Date: Mon, 01 Oct 2018 (08:46 IST)
Updated Date: Mon, 01 Oct 2018 (08:47 IST)
ಬೆಂಗಳೂರು: ಕೊನೆಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಎಷ್ಟೋ ದಿನಗಳಿಂದ ಮರೀಚಿಕೆಯಾಗಿದ್ದ ಟೀಂ ಇಂಡಿಯಾ ಸೇರುವ ಕನಸು ಇದೀಗ ನನಸಾಗಿದೆ.
ವಿಶೇಷವೆಂದರೆ ಈ ಬಾರಿ ವೆಸ್ಟ್ ಇಂಡೀಸ್ ಸರಣಿಗೆ ಘೋಷಣೆ ಮಾಡಿರುವ ಟೀಂ ಇಂಡಿಯಾದಲ್ಲಿ ಮೂವರು ಕನ್ನಡಿಗ ಬ್ಯಾಟ್ಸ್ ಮನ್ ಗಳಿದ್ದಾರೆ. ಅದರಲ್ಲೂ ಮಯಾಂಕ್ ಮತ್ತು ಕೆಎಲ್ ರಾಹುಲ್ ಕುಚಿಕು ಗೆಳೆಯರು.
ವೃತ್ತಿ ಜೀವನಕ್ಕೂ ಮೀರಿ ಖಾಸಗಿ ಬದುಕಿನಲ್ಲೂ ಇವರಿಬ್ಬರೂ ಖಾಸಾ ದೋಸ್ತುಗಳು. ಈಗ ಈ ಇಬ್ಬರೂ ಕುಚಿಕುಗಳು ಟೀಂ ಇಂಡಿಯಾ ಸೇರಿರುವುದು ವಿಶೇಷವೇ ಸರಿ. ಇವರಲ್ಲಿ ಕೆಎಲ್ ರಾಹುಲ್ ಗೆ ಪಕ್ಕಾ ಆಡುವ ಬಳಗದಲ್ಲಿ ಸ್ಥಾನ ಸಿಕ್ಕೇ ಸಿಗುತ್ತದೆ. ಉಳಿದಂತೆ ಮಯಾಂಕ್ ಗೆ ಅವಕಾಶ ಸಿಗುತ್ತದೋ ಅಥವಾ ಕರುಣ್ ನಾಯರ್ ರಂತೆ ಬೆಂಚ್ ಕಾಯಿಸಬೇಕಾಗುತ್ತದೋ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.