Publish Date: Sun, 30 Sep 2018 (09:07 IST)
Updated Date: Sun, 30 Sep 2018 (09:09 IST)
ದುಬೈ: ಏಷ್ಯಾ ಕಪ್ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾ ಹಂಗಾಮಿ ನಾಯಕ ರೋಹಿತ್ ಶರ್ಮಾ ತಾನು ಸುದೀರ್ಘ ಅವಧಿಗೆ ನಾಯಕನಾಗಲು ರೆಡಿ ಎಂದಿದ್ದಾರೆ.
ಫೈನಲ್ ಪಂದ್ಯದ ಗೆಲುವಿನ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಸುದೀರ್ಘ ಅವಧಿಗೆ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಳ್ಳುವಿರಾ ಎಂದು ಪ್ರಶ್ನಿಸಿದಾಗ ನಸು ನಗುತ್ತಲೇ ಉತ್ತರಿಸಿದ ರೋಹಿತ್ ‘ಖಂಡಿತಾ.. ಈಗ ಟೂರ್ನಮೆಂಟ್ ಗೆದ್ದಿದ್ದೇವಲ್ಲಾ. ಹಾಗಾಗಿ ಸುದೀರ್ಘ ಅವಧಿಗೆ ನಾಯಕತ್ವ ವಹಿಸಬೇಕಾಗಿ ಬಂದರೂ ರೆಡಿ’ ಎಂದಿದ್ದಾರೆ.
ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಬಗ್ಗೆ ರೋಹಿತ್ ಗೆ ಒಳಗೊಳಗೆ ಅಸಮಾಧಾನವಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ರೋಹಿತ್ ಇಂತಹದ್ದೊಂದು ಹೇಳಿಕೆ ನೀಡಿ ವಿರಾಟ್ ಗೆ ಟಾಂಗ್ ಕೊಟ್ಟರಾ ಎಂದು ಇದೀಗ ಕ್ರಿಕೆಟ್ ವಲಯ ಚರ್ಚಿಸುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.