Select Your Language

Notifications

webdunia
webdunia
webdunia
webdunia

ಸೆಲ್ಫಿ ಹುಚ್ಚಿಗೆ ಜೀವ ಕಳೆದುಕೊಂಡ ಶಿಕ್ಷಕಿ

ಸೆಲ್ಫಿ ಹುಚ್ಚಿಗೆ ಜೀವ ಕಳೆದುಕೊಂಡ ಶಿಕ್ಷಕಿ
ಪನಾಮಾ , ಸೋಮವಾರ, 15 ಅಕ್ಟೋಬರ್ 2018 (15:24 IST)
ಪನಾಮಾ : ಸೆಲ್ಪಿ ತೆಗೆಯಲು ಹೋಗಿ ಜೀವಕಳೆದುಕೊಂಡ ಘಟನೆ ಇತ್ತೀಚೆಗೆ ಹಲವು ಬಾರಿ ವರದಿಯಾಗಿತ್ತು. ಅದೇರೀತಿ ಇದೀಗ ದಕ್ಷಿಣ ಅಮೆರಿಕದ ಪನಾಮದಲ್ಲಿ ಸೆಲ್ಫಿ ತೆಗೆಯುವಾಗ 27ನೇ ಮಹಡಿಯಿಂದ ಬಿದ್ದು ಮಹಿಳೆಯೊಬ್ಬಳ ಪ್ರಾಣಪಕ್ಷಿ ಹಾರಿಹೋಗಿದೆ.

ಸಂದ್ರಾ ಮನ್ಯೂಲಾ ಡಾಕೋಸ್ಟಾ ಮೆಕೆಡೋ(27) ಮೃತಪಟ್ಟ ಮಹಿಳೆ. ಇಬ್ಬರ ಮಕ್ಕಳ ತಾಯಿಯಾಗಿರುವ ಈಕೆ ಪನಾಮದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಸಂದ್ರಾ ಬಾಲ್ಕನಿಯ ಕಂಬಿಗೆ ಒರಗಿಕೊಂಡು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಆಯ ತಪ್ಪಿ 27ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಮಹಿಳೆ ಮಹಡಿಯಿಂದ ಬಿಳುತ್ತಿರುವುದನ್ನು ಅಲ್ಲಿದ್ದ ಜನರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ.

 

ಸದ್ಯ ಪೊಲೀಸರು ಈ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಮಹಿಳೆ ಗಾಳಿಯ ರಭಸಕ್ಕೆ ಆಯತಪ್ಪಿ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಪತ್ರಕರ್ತರ ಕಲ್ಯಾಣ ಕಾರ್ಯಕ್ರಮಗಳಿಗೆ ನೆರವು: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭರವಸೆ