Select Your Language

Notifications

webdunia
webdunia
webdunia
webdunia

ತಾಯಿಗೆ ಬೈದನೆಂದು ಯುವಕನ ತಲೆ ಕತ್ತರಿಸಿದ ಮಗ

ತಾಯಿಗೆ ಬೈದನೆಂದು ಯುವಕನ ತಲೆ ಕತ್ತರಿಸಿದ ಮಗ
ಮಂಡ್ಯ , ಭಾನುವಾರ, 30 ಸೆಪ್ಟಂಬರ್ 2018 (08:49 IST)
ಮಂಡ್ಯ : ಯುವಕನೊಬ್ಬ ತನ್ನ ತಾಯಿಗೆ ಬೈದನೆಂದು ಮಗನೋರ್ವ ಯುವಕನ ರುಂಡ ಕತ್ತರಿಸಿರುವ ಘಟನೆ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ನಡೆದಿದೆ.


ಚಿಕ್ಕಬಾಗಿಲು ಗ್ರಾಮದ ಪಶುಪತಿ (24) ಆರೋಪಿಯಾಗಿದ್ದು, ಅದೇ ಗ್ರಾಮದ ಗಿರೀಶ್ (35) ಕೊಲೆಯಾದ ವ್ಯಕ್ತಿ ಎಂಬುದಾಗಿ ತಿಳಿದು ಬಂದಿದೆ. ಗಿರೀಶ್ ತನ್ನ ತಾಯಿಗೆ ಅವಾಚ್ಯ ಶಬ್ದದಿಂದ ಬೈದನೆಂದು ಕೋಪಗೊಂಡ ಮಗ ಪಶುಪತಿ ಆತನ ತಲೆಯನ್ನು ಕತ್ತರಿಸಿದ್ದಾನೆ.


ಅಷ್ಟೆ ಅಲ್ಲದೇ ತಾನು ಕತ್ತರಿಸಿದ ರುಂಡವನ್ನು  ಕೈಯಲ್ಲಿ ಹಿಡಿದುಕೊಂಡು ಮಳವಳ್ಳಿ ಪೊಲೀಸ್ ಠಾಣೆಗೆ  ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ. ಈ ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೆರಿಗೆಗಾಗಿ ತವರು ಮನೆಗೆ ಬಂದ ಪತ್ನಿಯ ಶೀಲ ಶಂಕಿಸಿ ಕತ್ತು ಕೊಯ್ದು ಕೊಲೆ ಮಾಡಿದ ಪಾಪಿ ಪತಿ