Select Your Language

Notifications

webdunia
webdunia
webdunia
webdunia

ಕೆನಡಾಕ್ಕೆ ಮಾರ್ಕ್‌ ಕಾರ್ನಿ ನೂತನ ಸಾರಥಿ: ಭಾರತದೊಂದಿಗೆ ಮತ್ತೆ ಸಂಬಂಧ ಕುದುರುತ್ತಾ

Canadian Prime Minister Mark Carney

Sampriya

ಕೆನಡಾ , ಸೋಮವಾರ, 10 ಮಾರ್ಚ್ 2025 (14:23 IST)
Photo Courtesy X
ಕೆನಡಾ: ಕೆನಡಾ ದೇಶದ ನೂತನ ಪ್ರಧಾನಿಯಾಗಿ ಆಡಳಿತರೂಢ ಲಿಬರಲ್‌ ಪಕ್ಷದ ಮಾರ್ಕ್‌ ಕಾರ್ನಿ ಅವರು ಆಯ್ಕೆಯಾಗುವುದು ಖಚಿತವಾಗಿದೆ.

ಲಿಬರಲ್‌ ಪಕ್ಷವು ತಮ್ಮ ನಾಯಕರಾಗಿ ಕೇಂದ್ರ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮಾರ್ಕ್‌ ಕಾರ್ನಿ ಅವರನ್ನು ಆಯ್ಕೆ ಮಾಡಿದೆ. ಹಿಂದಿನ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು ಜನವರಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ಸ್ಥಾನವನ್ನು 59 ವರ್ಷ ವಯಸ್ಸಿನ ಕಾರ್ನಿ ತುಂಬಲಿದ್ದಾರೆ.

ಟ್ರುಡೊ ಮತ್ತು ಭಾರತ ನಡುವಿನ ಸಂಬಂಧ ಹಳಸಿತ್ತು. ಉಭಯ ದೇಶಗಳು ತಮ್ಮ ರಾಯಭಾರಿಗಳನ್ನು ವಾಪಸ್‌ ಕರೆಸಿಕೊಂಡಿದ್ದರು. ಇದೀಗ ನೂತನ ಪ್ರಧಾನಿ ಆಯ್ಕೆ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಸಂಬಂಧದ ಬಗ್ಗೆ ಹೊಸ ಭರವಸೆ ಮೂಡಿದೆ.

ಬ್ಯಾಂಕ್‌ ಆಫ್‌ ಕೆನಡಾ ಅಧ್ಯಕ್ಷರಾಗಿದ್ದ ಕಾರ್ನಿ ಅವರು ಹಣಕಾಸು ಬಿಕ್ಕಟ್ಟನ್ನು ಯಶಸ್ವಿಯಾಗಿ ನಿಭಾಯಿಸಿ ಗಮನ ಸೆಳೆದಿದ್ದರು. 2008ರಲ್ಲಿ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ವೇಗವಾಗಿ ಚೇತರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವ್ಯಾಪಾರ ಯುದ್ಧ ಬೆದರಿಕೆ ಮತ್ತು ಫೆಡರಲ್‌ ಚುನಾವಣೆ ಹತ್ತಿರದಲ್ಲೇ ಇರುವ ಸಂದರ್ಭದಲ್ಲಿ ಕಾರ್ನಿ ನೇಮಕ ಮಹತ್ವ ಪಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರನ್ಯಾ ರಾವ್ ಚಿನ್ನ ಕಳ್ಳಸಾಗಣಿಕೆಗೆ ಇಬ್ಬರು ಸಚಿವರ ಸಹಾಯ: ಬಂಧನದ ವೇಳೆಯೇ ಹೋಗಿತ್ತು ಕರೆ