ಲಂಡನ್: ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮೇಲೆ ಲಂಡನ್ ನಲ್ಲಿ ಖಲಿಸ್ತಾನಿ ಉಗ್ರರು ದಾಳಿಗೆ ಯತ್ನಿಸಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಲಂಡನ್ ನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಕಾರ್ಯಕ್ರಮವೊಂದನ್ನು ಮುಗಿಸಿ ಹೊರಬರುವಾಗ ವ್ಯಕ್ತಿಯೊಬ್ಬ ಕಾರಿಗೆ ಅಡ್ಡ ಬಂದು ರಾಷ್ಟ್ರಧ್ವಜವನ್ನು ಹರಿದುಹಾಕುತ್ತಾನೆ. ಈತ ಖಲಿಸ್ತಾನಿ ಬೆಂಬಲಿಗ ಎನ್ನಲಾಗಿದೆ.
ಇನ್ನೊಂದು ವಿಡಿಯೋದಲ್ಲಿ ಖಲಿಸ್ತಾನಿ ಉಗ್ರರು ತನ್ನ ಬಾವುಟ ಹಾರಿಸಿ ಖಲಿಸ್ತಾನಿ ಪರ ಘೋಷಣೆಗಳನ್ನು ಕೂಗುತ್ತಾರೆ. ಆದರೆ ಘಟನೆ ಬಗ್ಗೆ ಭಾರತ ಅಥವಾ ಬ್ರಿಟನ್ ನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಸದ್ಯಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಲಂಡನ್ ಪ್ರವಾಸದಲ್ಲಿದ್ದು ಉನ್ನತ ಮಟ್ಟದ ಮಾತುಕತೆ, ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆರು ದಿನಗಳ ಕಾಲ ಅವರು ಲಂಡನ್ ಪ್ರವಾಸದಲ್ಲಿರಲಿದ್ದಾರೆ.