ನ್ಯೂಯಾರ್ಕ್: ಕಾಮಕ್ಕೆ ಕಣ್ಣಿಲ್ಲ ಎನ್ನುವುದು ಇತ್ತೀಚೆಗಿನ ದಿನಗಳಲ್ಲಿ ಪದೇ ಪದೇ ಸಾಬೀತಾಗುತ್ತಿದೆ. ನ್ಯೂಯಾರ್ಕ್ ನಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲೇ ಸತ್ತ ಹೆಣದ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದು ಈತನ ಕೃತ್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ.
ಬುಧವಾರ ಲೋವರ್ ಮ್ಯಾನ್ ಹಟನ್ ಸಬ್ ವೇ ರೈಲಿನಲ್ಲಿ ಘಟನೆ ನಡೆದಿದೆ. ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂಲಗಳ ಪ್ರಕಾರ ರೈಲಿನಲ್ಲಿ ಕೂತ ಭಂಗಿಯಲ್ಲಿ ಪುರುಷ ವ್ಯಕ್ತಿಯ ಶವವಿತ್ತು.
ಆರೋಪಿ ಆ ಶವವದೊಂದಿಗೆ ಸಂಭೋಗ ನಡೆಸಿದ್ದಾನೆ. ಬಳಿಕ ತನ್ನ ನಿಲ್ದಾಣ ಬಂದಾಗ ಏನೂ ಅರಿಯದವನಂತೆ ಬ್ಯಾಗ್ ಎತ್ತಿಕೊಂಡು ತೆರಳಿದ್ದಾನೆ. ಇದೀಗ ಪೊಲೀಸರು ಆರೋಪಿಯ ಮುಖಚಹರೆಯನ್ನು ಬಿಡುಗಡೆ ಮಾಡಿದ್ದಾರೆ. ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಇನ್ನೊಂದೆಡೆ ರೈಲಿನಲ್ಲಿ ಪತ್ತೆಯಾಗಿರುವ ಮೃತದೇಹ ಯಾರದ್ದು, ಸಾವಿಗೆ ಕಾರಣವೇನು ಎಂಬ ಬಗ್ಗೆ ವೈದ್ಯಕೀಯ ತಂಡ ಪರೀಕ್ಷೆ ನಡೆಸುತ್ತಿದೆ. ಈತನ ಕೃತ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.