ಬೆಂಗಳೂರು: ಬೇಸಿಗೆ ರಜೆ ಎಂದು ಊರಿಗೆ, ಪ್ರವಾಸ ತೆರಳುವ ಮುನ್ನ ಬೆಂಗಳೂರಿಗರು ಪೊಲೀಸ್ ಕಮಿಷನರ್ ಬಿ ದಯಾನಂದ್ ನೀಡಿರುವ ಈ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಿ. ಇದು ನಿಮ್ಮ ಸುರಕ್ಷತೆಗಾಗಿ.
ಬೆಂಗಳೂರು ನಗರದಲ್ಲಿ ಸಾಕಷ್ಟು ಬಾರಿ ಬೀಗ ಹಾಕಿದ ಮನೆಗೆ ಕನ್ನ ಹಾಕುವ ಪ್ರಕರಣಗಳು ನಡೆದಿವೆ. ಹೀಗಾಗಿ ಅಪರಾಧ ಕೃತ್ಯಗಳನ್ನು ತಡೆಯಲು ಬೆಂಗಳೂರಿಗರು ಕೆಲವೊಂದು ಸೂಚನೆಗಳನ್ನು ಪಾಲಿಸಬೇಕು ಎಂದು ಕಮಿಷನರ್ ಬಿ ದಯಾನಂದ್ ಸಲಹೆ ನೀಡಿದ್ದಾರೆ.
ಗೈಡ್ ಲೈನ್ಸ್ ಇಲ್ಲಿದೆ ನೋಡಿ
-ಮನೆಗೆ ಗುಣಮಟ್ಟದ ಬೀಗ ಹಾಕಿ
-ಮನೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿ
-ಬೀಗದ ಕೈಯನ್ನು ಪಕ್ಕದ ಮನೆಯಲ್ಲೋ, ಮನೆಯ ಯಾವುದೋ ಒಂದು ಭಾಗದಲ್ಲೋ ಅವಿತಿಟ್ಟು ಹೋಗಬೇಡಿ.
-ಹಲವು ದಿನಗಳಿಗೆ ಪ್ರವಾಸ ಹೋಗುವುದಿದ್ದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ.
-ವಿಶ್ವಾಸಾರ್ಹ ವ್ಯಕ್ತಿಗಳನ್ನೇ ಮನೆ ಕೆಲಸಕ್ಕೆ ನೇಮಿಸಿ.
-ಮನೆಯಲ್ಲಿ ಚಿನ್ನಾಭರಣಗಳನ್ನು ಇಟ್ಟು ಹೋಗಬೇಡಿ
-ಬೆಲೆ ಬಾಳುವ ವಸ್ತುಗಳನ್ನು ಕೆಲಸದವರ ಮುಂದೆ, ಇತರರ ಮುಂದೆ ಪ್ರದರ್ಶಿಸಬೇಡಿ.
ಪ್ರವಾಸ ಹೋಗುವುದಿದ್ದರೆ ಅಥವಾ ಮನೆಯಲ್ಲಿಯೇ ಇದ್ದರೂ ಈ ಕೆಲವೊಂದು ಸೂಚನೆಗಳನ್ನು ಪಾಲಿಸುವುದರಿಂದ ಅಪರಾಧ ಪ್ರಕರಣಗಳನ್ನು ತಕ್ಕಮಟ್ಟಿಗೆ ತಡೆಯಬಹುದು ಎಂದು ಅವರು ಸೂಚನೆ ನೀಡಿದ್ದಾರೆ.