Select Your Language

Notifications

webdunia
webdunia
webdunia
webdunia

ಇದೆಂತಾ ವಿಚಿತ್ರ! ಬಡತನದ ಹೆಸರಿನಲ್ಲಿ ಅಸುಗೂಸುಗಳ ಮದುವೆ

ಇದೆಂತಾ ವಿಚಿತ್ರ! ಬಡತನದ ಹೆಸರಿನಲ್ಲಿ ಅಸುಗೂಸುಗಳ ಮದುವೆ
ನವದೆಹಲಿ , ಮಂಗಳವಾರ, 16 ನವೆಂಬರ್ 2021 (09:45 IST)
ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ವಯಸ್ಸಿಗೆ ಬಾರದ ಹೆಣ್ಣು ಮಕ್ಕಳ ಭವಿಷ್ಯವು ಕತ್ತಲೆಯಲ್ಲಿದೆ.
ಅದರಲ್ಲೂ ಪರಿಸ್ಥಿತಿ ಎಷ್ಟು ಭೀಕರವಾಗಿದೆಯೆಂದರೆ 20 ದಿನದ ಹೆಣ್ಣುಮಗುವಿಗೆ ಮದುವೆಯ ಪ್ರಸ್ತಾಪವನ್ನು ಮಾಡಲಾಗುತ್ತಿದೆ. ಅಫ್ಘಾನಿಸ್ತಾನದ ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್  ಪ್ರಕಾರ, ಕೆಲವು ಕುಟುಂಬಗಳು ವರದಕ್ಷಿಣೆಗೆ ಬದಲಾಗಿ ವಯಸ್ಸಿಗೆ ಬಾರದ ಹೆಣ್ಣುಮಕ್ಕಳಿಗೆ ವಿವಾಹ ಮಾಡುತ್ತಿದ್ದಾರೆ.
ಅಂಕಿಅಂಶಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಶೇಕಡಾ 28ರಷ್ಟು ಹುಡುಗಿಯರು 15 ವರ್ಷಕ್ಕಿಂತ ಮೊದಲು ಮತ್ತು ಶೇಕಡಾ 49 ರಷ್ಟು ಹುಡುಗಿಯರು 18 ವರ್ಷಕ್ಕಿಂತ ಮೊದಲು ವಿವಾಹವಾಗುತ್ತಿದ್ದಾರೆ. ದೇಶದ ರಾಜಕೀಯ ಅಸ್ಥಿರತೆಯಕ್ಕಿಂತ ಮೊದಲು, ಅಂದರೆ 2018 ಮತ್ತು 2019 ರಲ್ಲಿ ಹೆರಾತ್ನಲ್ಲಿ 183 ಬಾಲ್ಯ ವಿವಾಹಗಳು ನಡೆದಿವೆ. ಬಾಗ್ದಾದ್ ಪ್ರಾಂತ್ಯಗಳಲ್ಲಿ ಸಾವಿರಾರು ಮಕ್ಕಳನ್ನು ಮಾರಾಟ ಮಾಡಲಾಯಿತು. ಮಾರಾಟವಾದ ಹೆಚ್ಚಿನ ಮಕ್ಕಳು 17 ವರ್ಷದೊಳಗಿನವರಾಗಿದ್ದರು ಎಂದು ತಿಳಿದುಬಂದಿದೆ.
UಓIಅಇಈ ನ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟ್ಟಾ ಫೋರ್ ವರದಿಗಳ ನೋಡಿ "ತುಂಬಾ ಚಿಂತಾಜನಕ" ಎಂದು ಹೇಳಿದ್ದಾರೆ.
ಹೆಣ್ಣುಮಗುವನ್ನು ಮತ್ತು ಮಕ್ಕಳನ್ನು ಮಾರಾಟ ಮಾಡುತ್ತಿರುವಂತೆ ನಂಬಲರ್ಹವಾದ ವರದಿಗಳನ್ನು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿದೆ. ಕುಟುಂಬಗಳು ನಿರಾಶಾದಾಯಕ ಜೀವನ ನಡೆಸಬೇಕಾಗಿದೆ. ಕೊರೊನಾ ವೈರಸ್ ದೇಶದಲ್ಲಿ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ ಮತ್ತು ಚಳಿಗಾಲವು ಸಮೀಪಿಸುತ್ತಿದೆ.
2020 ರಲ್ಲಿ ಅಫ್ಘಾನಿಸ್ತಾನದ ಜನಸಂಖ್ಯೆಯ ಅರ್ಧದಷ್ಟು ಜನರು ಬಡವರಾಗಿದ್ದರು ಮತ್ತು ಶುದ್ಧ ನೀರು ಮತ್ತು ಪೌಷ್ಟಿಕ ಆಹಾರದ ಕೊರತೆಯಿತ್ತು. ಆದರೆ ಈಗ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚು ಜನರು ಬಡತನಕ್ಕೆ ಸಿಲುಕಿದ್ದಾರೆ. ಇದರಿಂದ ಹಣ ಸಂಪಾದನೆಗಾಗಿ ಬೇರೆ ಮಾರ್ಗಗಳನ್ನು ಆಶ್ರಯಿಸಬೇಕಾಗಿದೆ. ಜನರು ಮಕ್ಕಳನ್ನು ದುಡಿಸುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸುಧಾಮೂರ್ತಿ ಬಡವರ ನಾಡಿ ಮಿಡಿತ ಬಲ್ಲವರು!