Select Your Language

Notifications

webdunia
webdunia
webdunia
webdunia

ಅಫ್ಘಾನಿಸ್ತಾನಕ್ಕೆ ಸೋಲು: ಟಿ20 ವಿಶ್ವಕಪ್ ನಿಂದ ಹೊರಬಿದ್ದ ಟೀಂ ಇಂಡಿಯಾ

ಅಫ್ಘಾನಿಸ್ತಾನಕ್ಕೆ ಸೋಲು: ಟಿ20 ವಿಶ್ವಕಪ್ ನಿಂದ ಹೊರಬಿದ್ದ ಟೀಂ ಇಂಡಿಯಾ
ದುಬೈ , ಭಾನುವಾರ, 7 ನವೆಂಬರ್ 2021 (18:54 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಆಫ್ಘಾನಿಸ್ತಾನವನ್ನು 8 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸುವುದರೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ಕನಸು ಭಗ್ನವಾಗಿದೆ.

2012 ರ ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ಹಂತಕ್ಕೇರಲು ವಿಫಲವಾದಂತಾಗಿದೆ. ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 124 ರನ್ ಗಳಿಸಿತು. ಈ ಸುಲಭ ಮೊತ್ತವನ್ನು ನ್ಯೂಜಿಲೆಂಡ್ 18.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿ ಗೆಲುವು ಕಂಡಿತು.

ಇದರೊಂದಿಗೆ ನ್ಯೂಜಿಲೆಂಡ್ ಬಿ ಗುಂಪಿನ ಎರಡನೇ ತಂಡವಾಗಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆಯಿತು. ಅತ್ತ ಭಾರತ ಇದರೊಂದಿಗೆ ನಾಳೆ ಈ ಸಾಲಿನ ವಿಶ್ವಕಪ್ ನಲ್ಲಿ ಕೊನೆಯ ಪಂದ್ಯವಾಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ ಹೊಸ ನಾಯಕನ ಆಯ್ಕೆ ಮಂಗಳವಾರ