Publish Date: Sun, 07 Nov 2021 (10:05 IST)
Updated Date: Sun, 07 Nov 2021 (10:15 IST)
ಮುಂಬೈ: ಟೀಂ ಇಂಡಿಯಾ ಕಿರು ಮಾದರಿ ಕ್ರಿಕೆಟ್ ಗೆ ಹೊಸ ನಾಯಕನ ಆಯ್ಕೆಗೆ ಬಿಸಿಸಿಐ ಮಂಗಳವಾರ ಸಭೆ ಸೇರಲಿದೆ.
ವಿಶ್ವಕಪ್ ಬಳಿಕ ಟಿ20 ನಾಯಕತ್ವದಿಂದ ವಿರಾಟ್ ಕೊಹ್ಲಿ ಹೊರನಡೆಯಲಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ರೋಹಿತ್ ಶರ್ಮಾ ಹೆಸರು ಬಲವಾಗಿ ಕೇಳಿಬರುತ್ತಿದೆ.
ಆದರೆ ಅಧಿಕೃತವಾಗಿ ಬಿಸಿಸಿಐ ಸಭೆ ಸೇರಿ ಸರ್ವಾನುಮತದಿಂದ ನಾಯಕನ ಆಯ್ಕೆ ಮಾಡಲಿದೆ. ನವಂಬರ್ 17 ರಿಂದ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಈ ಸರಣಿಗೂ ಮೊದಲು ಹೊಸ ನಾಯಕನ ಆಯ್ಕೆ ನಡೆಯಲಿದೆ.