Publish Date: Sat, 06 Nov 2021 (08:57 IST)
Updated Date: Sat, 06 Nov 2021 (08:59 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ನಿನ್ನೆ ವೇಗದ ಅರ್ಧಶತಕ ಸಿಡಿಸಿ ಮಿಂಚಿದ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಪ್ರೇಯಸಿ ಅಥಿಯಾ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ಕೊಟ್ಟಿದ್ದಾರೆ.
ಅರ್ಧಶತಕ ಗಳಿಸಿದ ವೇಳೆ ಬಾಲ್ಕನಿಯಲ್ಲಿ ಕೂತಿದ್ದ ಅಥಿಯಾ ಕಡೆಗೆ ಬ್ಯಾಟ್ ಎತ್ತಿ ತೋರಿಸಿದ್ದಾರೆ. ಅಥಿಯಾ ಕೂಡಾ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.
ನಿನ್ನೆ ಅಥಿಯಾ ಶೆಟ್ಟಿ ಬರ್ತ್ ಡೇ ಇತ್ತು. ಈ ವಿಶೇಷ ದಿನಕ್ಕೆ ಕೆಎಲ್ ಪ್ರೇಯಸಿಗೆ ಅದ್ಭುತ ಉಡುಗೊರೆಯನ್ನೇ ನೀಡಿದ್ದಾರೆ. ಅವರ 19 ಎಸೆತಗಳಲ್ಲಿ 3 ಸಿಕ್ಸರ್, 6 ಬೌಂಡರಿ ಸಹಿತ 50 ರನ್ ಸಿಡಿಸಿ ಔಟಾದರು.