ದುಬೈ: ಟಿ20 ವಿಶ್ವಕಪ್ ನಲ್ಲಿ ಇಂದು ಟೀಂ ಇಂಡಿಯಾ ಸ್ಕಾಟ್ ಲೆಂಡ್ ತಂಡದ ವಿರುದ್ಧ ಪಂದ್ಯವಾಡುತ್ತಿದ್ದು, ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಸತತವಾಗಿ ಟಾಸ್ ಸೋಲುತ್ತಿದ್ದ ಕೊಹ್ಲಿ ಕೊನೆಗೂ ಬರ್ತ್ ಡೇ ದಿನ ಅದೃಷ್ಟವಶಾತ್ ಟಾಸ್ ಗೆದ್ದಿದ್ದಾರೆ. ಬಳಿಕ ಮಾತನಾಡಿರುವ ಅವರು ಮೊದಲ ಪಂದ್ಯವನ್ನು ನಾವು ನನ್ನ ಬರ್ತ್ ಡೇ ದಿನವೇ ಆಡಬೇಕಿತ್ತು ಎಂದು ತಮಾಷೆಯಾಗಿ ಹೇಳಿದ್ದಾರೆ.
ಇನ್ನು, ಈ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರಾದ್ಧೂಲ್ ಠಾಕೂರ್ ಬದಲಿಗೆ ವರುಣ್ ಚಕ್ರವರ್ತಿಗೆ ಸ್ಥಾನ ನೀಡಿದೆ. ಉಳಿದಂತೆ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುತ್ತಿದೆ.