Select Your Language

Notifications

webdunia
webdunia
webdunia
webdunia

ಗೊಂದಲದ ಗೂಡಾಗಿದೆ ಟೀಂ ಇಂಡಿಯಾ

ಗೊಂದಲದ ಗೂಡಾಗಿದೆ ಟೀಂ ಇಂಡಿಯಾ
ದುಬೈ , ಗುರುವಾರ, 4 ನವೆಂಬರ್ 2021 (09:30 IST)
ದುಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ನಲ್ಲಿ ನೀಡಿದ ಪ್ರದರ್ಶನ ಮಾಜಿ ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಇದಕ್ಕೆ ಟೀಂ ಇಂಡಿಯಾದಲ್ಲಿರುವ ಗೊಂದಲಗಳೇ ಕಾರಣ ಎನ್ನುತ್ತಿದ್ದಾರೆ.

ತಂಡದಲ್ಲಿ ನಾಯಕ ಕೊಹ್ಲಿ ಒಂದು ಕಡೆಯಾದರೆ, ಮೆಂಟರ್ ಆಗಿ ಧೋನಿ, ಕೋಚ್ ಆಗಿ ರವಿಶಾಸ್ತ್ರಿ ಬಳಗ.. ಹೀಗೇ ಡಿಸಿಷನ್ ಮೇಕರ್ ಗಳ ಗುಂಪೇ ಇದೆ. ಇದರಿಂದಾಗಿ ಟೀಂ ಇಂಡಿಯಾ ಗೊಂದಲದ ಗೂಡಾಗಿದೆ ಎಂದು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ಎರಡು ಪಂದ್ಯಗಳ ಸೋಲಿನ ಬಿಸಿ ಭಾರತೀಯ ಕ್ರಿಕೆಟಿಗರಿಗೆ ತಾಕಲೇಬೇಕು. ಇದಕ್ಕೆ ಅವರೇ ಹೊಣೆ. ಅವರ ಶಾಟ್ ಸೆಲೆಕ್ಷನ್, ಸೊರಗಿದ ಬ್ಯಾಟಿಂಗ್ ಕಾರಣ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ದೂರಿದ್ದಾರೆ. ಇದಕ್ಕೂ ಮೊದಲು ಸುನಿಲ್ ಗವಾಸ್ಕರ್ ನಾಯಕ ಕೊಹ್ಲಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಟ್ಟು ಬಹುನಾಯಕತ್ವದಿಂದಾಗಿ ಟೀಂ ಇಂಡಿಯಾ ಆಟಗಾರರು ಗೊಂದಲಕ್ಕಳಾಗಿದ್ದಾರೆಯೇ ಎಂಬ ಅನುಮಾನ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಚ್ ಆಗಿ ರಾಹುಲ್ ದ್ರಾವಿಡ್ ಜೊತೆ ಕೆಲಸ ಮಾಡೋದೇ ಖುಷಿ: ರೋಹಿತ್ ಶರ್ಮಾ