Publish Date: Wed, 03 Nov 2021 (21:20 IST)
Updated Date: Wed, 03 Nov 2021 (21:22 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ದುರ್ಬಲ ಅಫ್ಘಾನಿಸ್ತಾನದ ವಿರುದ್ಧ ಟೀಂ ಇಂಡಿಯಾ ಬ್ಯಾಟರ್ ಗಳು ಅಬ್ಬರದ ಬ್ಯಾಟಿಂಗ್ ಮಾಡಿದ್ದು, ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾಕ್ಕೆ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಸ್ಪೋಟಕ ಆರಂಭ ನೀಡಿದರು. ಪರಿಣಾಮ 5 ಓವರ್ ಗಳಲ್ಲಿ ಭಾರತದ ಮೊತ್ತ 50 ದಾಟಿತ್ತು. ಕೆಎಲ್ ರಾಹುಲ್ 69 ರನ್, ರೋಹಿತ್ 74 ರನ್ ಗಳಿಸಿ ಔಟಾದರು.
ಅಂತಿಮ ಹಂತದಲ್ಲಿ ರಿಷಬ್ ಪಂತ್ 13 ಎಸೆತಗಳಲ್ಲಿ 27 ರನ್ ಮತ್ತು ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 35 ರನ್ ಸೇರಿಸಿ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು.