Select Your Language

Notifications

webdunia
webdunia
webdunia
webdunia

ಜಾಹೀರಾತು ಜನಪ್ರಿಯತೆಯೇ ಟೀಂ ಇಂಡಿಯಾಗೆ ಮುಳುವು?

ಜಾಹೀರಾತು ಜನಪ್ರಿಯತೆಯೇ ಟೀಂ ಇಂಡಿಯಾಗೆ ಮುಳುವು?
ದುಬೈ , ಬುಧವಾರ, 3 ನವೆಂಬರ್ 2021 (07:24 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೀಡಿದ್ದು ಅಭಿಮಾನಿಗಳಿಗೆ ಬೇಸರ ತಂದಿದೆ. ಟೀಂ ಇಂಡಿಯಾ ಸೋಲಿಗೆ ಈಗ ವಿಶ್ಲೇಷಣಗಳೂ ನಡೆಯುತ್ತಿವೆ.

ಭಾರತ ತಂಡದ ಸೋಲಿಗೆ ಜಾಹೀರಾತು ಜನಪ್ರಿಯತೆಯೂ ಕಾರಣ ಎನ್ನಲಾಗಿದೆ. ಭಾರತ ಆಡುವ ಪಂದ್ಯಗಳನ್ನು ಅತೀ ದೊಡ್ಡ ಕ್ರೀಡಾಂಗಣ ದುಬೈ ಮೈದಾನದಲ್ಲೇ ಆಯೋಜಿಸಲಾಗಿದೆ. ಅಲ್ಲದೆ, ಭಾರತ ಆಡುವ ಪಂದ್ಯವನ್ನು ಹೆಚ್ಚು ಸಂಖ್ಯೆಯಲ್ಲಿ ವೀಕ್ಷಿಸುತ್ತಾರೆನ್ನುವ ಕಾರಣಕ್ಕೆ ಸಂಜೆ 7.30 ರ ಸಮಯದಲ್ಲೇ ಹೆಚ್ಚಿನ ಪಂದ್ಯಗಳಿವೆ.

ಸಂಜೆ ದುಬೈ ಮೈದಾನದಲ್ಲಿ ಇಬ್ಬನಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದಾಗಿ ಬೌಲಿಂಗ್ ಕಷ್ಟ. ದುರಾದೃಷ್ಟವಶಾತ್ ಕೊಹ್ಲಿ ಟಾಸ್ ಸೋಲುವುದರಲ್ಲೇ ಫೇಮಸ್. ಹೀಗಾಗಿ ಆಡಿದ ಎರಡೂ ಪಂದ್ಯಗಳಲ್ಲಿ ಭಾರತ ಮೊದಲು ಬ್ಯಾಟಿಂಗ್ ನಡೆಸಿದೆ. ಇದುವೇ ಸೋಲಿಗೆ ಕಾರಣ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್: ಇಂದು ಭಾರತಕ್ಕೆ ಆಫ್ಘನ್ ಸವಾಲು