Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್: ಗೆದ್ದು ಕನಸು ಜೀವಂತಗೊಳಿಸಿದ ಟೀಂ ಇಂಡಿಯಾ

ಟಿ20 ವಿಶ್ವಕಪ್: ಗೆದ್ದು ಕನಸು ಜೀವಂತಗೊಳಿಸಿದ ಟೀಂ ಇಂಡಿಯಾ
ದುಬೈ , ಗುರುವಾರ, 4 ನವೆಂಬರ್ 2021 (08:47 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಸತತ ಎರಡು ಸೋಲುಗಳ ಬಳಿಕ ಕೊನೆಗೂ ಟೀಂ ಇಂಡಿಯಾ ಗೆದ್ದುಕೊಂಡಿದೆ. ಅಫ್ಘಾನಿಸ್ತಾನ ವಿರುದ್ಧ 66 ರನ್ ಗಳ ಗೆಲುವು ಸಾಧಿಸಿದೆ.

ಈ ಭಾರೀ ಅಂತರದ ಗೆಲುವಿನ ಬೆನ್ನಲ್ಲೇ ಭಾರತ ಮುಂದಿನ ಹಂತಕ್ಕೆ ತೇರ್ಗಡೆಯಾಗುವ ಕನಸು ಜೀವಂತವಾಗಿರಿಸಿದೆ. ನಿನ್ನೆಯ ಪಂದ್ಯದಲ್ಲಿ ಭಾರತ 211 ರನ್ ಗಳ ಬೃಹತ್ ಗೆಲುವಿನ ಗುರಿ ನಿಗದಿಪಡಿಸಿತ್ತು.

ಇದನ್ನು ಬೆನ್ನತ್ತಿದ್ದ ಆಫ್ಘನ್ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಬಳಿಕ ಕೆಳ ಕ್ರಮಾಂಕದಲ್ಲಿ ನಾಯಕ ಮೊಹಮ್ಮದ್ ನಬಿ 35, ಕರೀಂ ಜನತ್ ಔಟಾಗದೇ 42 ರನ್ ಗಳಿಸಿ ಆಧಾರವಾದರು. ಹಾಗಿದ್ದರೂ ಅಂತಿಮವಾಗಿ ಬಾಂಗ್ಲಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೇ ಶಕ್ತವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್: ಅಫ್ಘನ್ ಎದುರು ಟೀಂ ಇಂಡಿಯಾ ಅಬ್ಬರ