Select Your Language

Notifications

webdunia
webdunia
webdunia
webdunia

ಮದುವೆಯಲ್ಲಿ ಮ್ಯೂಸಿಕ್ ಹಾಕಿದ್ದಕ್ಕೆ ಹತ್ಯೆ ಗೈದ ತಾಲಿಬಾನ್!

ಮದುವೆಯಲ್ಲಿ ಮ್ಯೂಸಿಕ್ ಹಾಕಿದ್ದಕ್ಕೆ ಹತ್ಯೆ ಗೈದ ತಾಲಿಬಾನ್!
ನವದೆಹಲಿ , ಸೋಮವಾರ, 1 ನವೆಂಬರ್ 2021 (09:35 IST)
ಮದುವೆ ಮನೆಯೊಂದರಲ್ಲಿ ಮ್ಯೂಸಿಕ್ ಹಾಕಿದ್ದರು ಎಂಬ ಕಾರಣಕ್ಕೆ 13 ಜನರನ್ನು ಕೊಂದು ಹಾಕಿದ ಆರೋಪ ತಾಲಿಬಾನಿಗಳ ವಿರುದ್ಧ ಕೇಳಿಬಂದಿದೆ.
ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಟ್ವೀಟ್ ಮಾಡುವ ಮೂಲಕ ಆರೋಪ ಮಾಡಿದ್ದಾರೆ. ಅಫ್ಘಾನಿಸ್ತಾನದ ನೆಂಗರ್ಹಾರ್ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಮ್ಯೂಸಿಕ್ ಹಾಕಲಾಗಿತ್ತು.  ಈ ವೇಳೆ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದ್ದಾನೆ. ಇನ್ನೂ ಗುಂಡು ಹಾರಿಸಿದವರನ್ನು ಬಂಧಿಸಲಾಗಿದೆ ಅಂತ ತಾಲಿಬಾನ್ ಆಡಳಿತ ಘಟನೆ ಬಗ್ಗೆ ಸಮಜಾಯಿಷಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದೆಂದೂ ಕೇಳದ ವಾಟ್ಸಾಪ್ ಹೊಸ ಫೀಚರ್!