Select Your Language

Notifications

webdunia
webdunia
webdunia
Friday, 4 April 2025
webdunia

ಆಫ್ಘನ್ ಪರ ವಾಲಿಬಾಲ್ ಆಡಿದ ಆಟಗಾರ್ತಿಯ ಕೊಂದ ತಾಲಿಬಾನಿಗರು!

ಅಫ್ಘಾನಿಸ್ತಾನ ವಾಲಿಬಾಲ್
ಕಾಬೂಲ್ , ಬುಧವಾರ, 20 ಅಕ್ಟೋಬರ್ 2021 (16:32 IST)
ಕಾಬೂಲ್: ಅಫ್ಘಾನಿಸ್ತಾನ ಪರ ಜ್ಯೂನಿಯರ್ ವಾಲಿಬಾಲ್ ಟೀಂನಲ್ಲಿ ಪಂದ್ಯವಾಡಿದ ಆಟಗಾರ್ತಿಯನ್ನು ತಾಲಿಬಾನಿಗರು ಕೊಂದಿದ್ದಾರೆ ಎಂದು ಆಕೆಯ ಕೋಚ್ ಆಪಾದಿಸಿದ್ದಾರೆ.


ಮಹ್ಜಾಬಿನ್ ಹಕಿಮಿ ಎಂಬ ತಾರೆ ಕೆಲವು ದಿನಗಳ ಹಿಂದೆ ಕಾಬೂಲ್ ಮುನ್ಸಿಪಾಲಿಟಿ ವಾಲಿಬಾಲ್ ಕ್ಲಬ್ ಪರ ಪಂದ್ಯವಾಡಿದ್ದಳು. ಆದರೆ ಇದೀಗ ಅವಳನ್ನು ತಾಲಿಬಾನಿಗರು ತಲೆ ಕಡಿದು ಪೈಶಾಚಿಕವಾಗಿ ಕೊಲೆ ಮಾಡಿದ್ದಾರೆ ಎಂದು ಕೋಚ್ ಆಪಾದಿಸಿದ್ದಾರೆ.

ಅಫ್ಘಾನಿಸ್ತಾವನ್ನು ತಾಲಿಬಾನ್ ವಶಪಡಿಸಿಕೊಳ್ಳುವ ಮೊದಲು ಇಬ್ಬರು ಆಟಗಾರ್ತಿಯರು ಮಾತ್ರ ದೇಶ ಬಿಟ್ಟು ಪಲಾಯನ ಮಾಡಲು ಯಶಸ್ವಿಯಾಗಿದ್ದರು. ಆದರೆ ಉಳಿದ ಆಟಗಾರ್ತಿಯರಿಗೆ ಜೀವ ಭಯವಿದೆ. ತಾಲಿಬಾನಿಗರುಮ ಮಹಿಳೆಯರು ಕ್ರೀಡಾ ಕೂಟಗಳಲ್ಲಿ ಭಾಗಿಯಾಗುವುದನ್ನು ವಿರೋಧಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಪಾಕಿಸ್ತಾನ ಕ್ರಿಕೆಟ್ ಗೆ ಪ್ರಕಾಶ್ ಪಡುಕೋಣೆ ಬೆಂಬಲ