ನವದೆಹಲಿ: ನಮ್ಮ ದೇಶದ ಮೇಲೆ ದಾಳಿ ಮಾಡಲು ಬಂದ ಪಾಕಿಸ್ತಾನವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿರುವ ಭಾರತೀಯ ಸೇನೆ ಎದುರಾಳಿಯ ಸೇನಾ ಪೋಸ್ಟ್ ಉಡೀಸ್ ಮಾಡಿರುವ ವಿಡಿಯೋವೊಂದನ್ನು ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ್ ಆರಂಭಿಸಿದ್ದು ಇದೀಗ 2 ನೇ ಭಾಗ ಜಾರಿಯಲ್ಲಿದೆ. ನಿನ್ನೆ ಭಾರತದ ಮೇಲೆ ದಾಳಿಗೆ ಮುಂದಾಗಿದ್ದಕ್ಕೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಿದೆ.
ಪಾಕಿಸ್ತಾನದ ಸೇನಾ ನೆಲೆಯನ್ನೇ ಉಡಾಯಿಸಿದೆ ಎಂದು ಸುದ್ದಿಯಾಗಿತ್ತು. ಇದೀಗ ಇದನ್ನು ಸ್ವತಃ ಭಾರತೀಯ ಸೇನೆಯೇ ವಿಡಿಯೋ ಮೂಲಕ ಖಚಿತಪಡಿಸಿದೆ. ನಮ್ಮ ದೇಶವನ್ನು ರಕ್ಷಣೆ ಮಾಡಲು ನಾವು ಸದಾ ಸಿದ್ಧ ಎಂದು ಸೇನೆ ಪೋಸ್ಟ್ ಮಾಡಿದೆ.