Select Your Language

Notifications

webdunia
webdunia
webdunia
webdunia

ಪಾಕ್ ಬಣ್ಣ ಬಯಲು ಮಾಡಿದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್

ಪಾಕ್ ಬಣ್ಣ ಬಯಲು ಮಾಡಿದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್
ಪಾಕಿಸ್ತಾನ , ಗುರುವಾರ, 7 ಮಾರ್ಚ್ 2019 (14:10 IST)
ಪಾಕಿಸ್ತಾನ : ನನ್ನ ಆಡಳಿತದ ಅವಧಿಯಲ್ಲಿ ಭಾರತದ ಮೇಲೆ ದಾಳಿ ಮಾಡಲು ಪಾಕ್ ಗುಪ್ತಚರ ಇಲಾಖೆ ಜೈಷೆ ಎ ಮೊಹಮ್ಮದ್ ಉಗ್ರ ಸಂಘಟನೆಯ ಸಹಾಯ ಪಡೆದುಕೊಳ್ಳುತ್ತಿತ್ತು ಎಂದು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.


ಪಾಕಿಸ್ತಾನದ ಪತ್ರಕರ್ತನೋರ್ವ ದೂರವಾಣಿ ಕರೆ ಮೂಲಕ ನಡೆಸಿದ ಸಂದರ್ಶನದನದ ವೇಳೆ ಮುಷರಫ್ ಅವರು, ‘’ಜೆಇಎಮ್​ ಒಂದು ಉಗ್ರ ಸಂಘಟನೆ. ನನ್ನ ಆಡಳಿತದ ಅವಧಿಯಲ್ಲಿ ದೇಶದ ಗುಪ್ತಚರ ಇಲಾಖೆ ಭಾರತದ ಮೇಲೆ ದಾಳಿಗಳನ್ನು ನಡೆಸಲು ಈ ಸಂಘಟನೆಯ ಸಹಾಯ ಪಡೆದುಕೊಳ್ಳುತ್ತಿತ್ತು. ಈಗ ಜೆಇಎಮ್​ ವಿರುದ್ಧ ತೆಗೆದುಕೊಂಡ ಕ್ರಮಗಳು ನಿಜಕ್ಕೂ ಸ್ವಾಗತಾರ್ಹ," ಎಂದು ಹೇಳಿದ್ದಾರೆ.


‘’2003ರ ಡಿಸೆಂಬರ್​ನಲ್ಲಿ ನನ್ನನ್ನು ಹತ್ಯೆ ಮಾಡಲು ಈ ಸಂಘಟನೆ ಪ್ರಯತ್ನಿಸಿತ್ತು. .ನನ್ನ ಅವಧಿಯಲ್ಲಿ ಉಗ್ರ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಅಂದಿನ ಪರಿಸ್ಥಿತಿ ಬೆರೆಯೇ ಇತ್ತು. ಭಾರತ-ಪಾಕಿಸ್ತಾನ ಒಬ್ಬರ ಮೇಲೋಬ್ಬರು ರಹಸ್ಯವಾಗಿ ದಾಳಿ ನಡೆಸುತ್ತಿದ್ದರು. ದೇಶದ ಗುಪ್ತಚರ ಇಲಾಖೆ ಇದರಲ್ಲಿ ಪಾಲ್ಗೊಳ್ಳುತ್ತಿತ್ತು," ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಅವರು ಬಿಜೆಪಿ ಸೇರುವ ಬಗ್ಗೆ ಬಿಎಸ್.ಯಡಿಯೂರಪ್ಪ ಹೇಳಿದ್ದೇನು?