Select Your Language

Notifications

webdunia
webdunia
webdunia
webdunia

ಲಕ್ಕಿ ಮೈದಾನದಲ್ಲೇ ಅವಮಾನ ಅನುಭವಿಸಿದ ಧೋನಿ!

ಲಕ್ಕಿ ಮೈದಾನದಲ್ಲೇ ಅವಮಾನ ಅನುಭವಿಸಿದ ಧೋನಿ!
ನಾಗ್ಪುರ , ಬುಧವಾರ, 6 ಮಾರ್ಚ್ 2019 (09:30 IST)
ನಾಗ್ಪುರ: ಇಲ್ಲಿನ ಮೈದಾನ ಧೋನಿ ಪಾಲಿಗೆ ಅದೃಷ್ಟದ ತಾಣ  ಎಂದೇ ಬಿಂಬಿತವಾಗಿದೆ. ಧೋನಿ ಇಲ್ಲಿ ಗಳಿಸಿದಷ್ಟು ರನ್ ಬೇರೆಲ್ಲೂ ಗಳಿಸಿಲ್ಲ. ಆದರೆ ನಿನ್ನೆಯ ಪಂದ್ಯದಲ್ಲಿ ಈ ಅದೃಷ್ಟದ ಮೈದಾನದಲ್ಲೇ ಧೋನಿ ಅವಮಾನ ಅನುಭವಿಸಬೇಕಾಯಿತು.


ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಧೋನಿ ನಾಗ್ಪುರ ಮೈದಾನದಲ್ಲಿ ಮೊದಲ ಬಾಲ್ ಗೇ ಔಟಾಗುವ ಮೂಲಕ ಗೋಲ್ಡನ್ ಡಕ್ ಅವಮಾನ ಅನುಭವಿಸಿದರು.

ಈ ಮೂಲಕ ಧೋನಿ ದಾಖಲೆಯೊಂದನ್ನೂ ತಪ್ಪಿಸಿಕೊಂಡರು. ತಮ್ಮ ಕ್ರಿಕೆಟ್ ಕೆರೆಯಿರ್ ನಲ್ಲಿ 17 ಸಾವಿರ ರನ್ ಗಳಿಸಿದ 6 ನೇ ಭಾರತೀಯ ಕ್ರಿಕೆಟಿಗ ಎನಿಸಿಕೊಳ್ಳಲು ಧೋನಿಗೆ 33 ರನ್ ಬೇಕಾಗಿತ್ತು. ಆದರೆ ಶೂನ್ಯಕ್ಕೆ ಔಟಾಗುವ ಮೂಲಕ ತಮ್ಮ ಅದೃಷ್ಟದ ಮೈದಾನದಲ್ಲೇ ಆ ದಾಖಲೆ ಮಾಡುವ ಅವಕಾಶ ಧೋನಿ ಕೈ ತಪ್ಪಿಹೋಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಔಟ್ ಮಾಡಲು ಆಸೀಸ್ ಬೌಲರ್ ಗೆ ಸಹಾಯ ಮಾಡಿದ್ದು ಭಾರತೀಯನೇ!