Publish Date: Wed, 06 Mar 2019 (08:57 IST)
Updated Date: Wed, 06 Mar 2019 (08:59 IST)
ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಧೋನಿ ಕೈಕುಲುಕಲು ಅಭಿಮಾನಿಯೊಬ್ಬ ಮೈದಾನಕ್ಕೆ ಇಳಿದಿದ್ದು, ಈತನನ್ನು ಕಂಡು ಧೋನಿ ಕಾಲ್ಕಿತ್ತ ತಮಾಷೆಯ ಪ್ರಸಂಗ ನಡೆದಿದೆ.
ಭಾರತ ಫೀಲ್ಡಿಂಗ್ ಗೆ ಮೈದಾನಕ್ಕಿಳಿದಾಗ ಅಭಿಮಾನಿಯೊಬ್ಬ ಧೋನಿಯ ಕೈಕುಲುಕಲು ಮೈದಾನಕ್ಕಿಳಿದಿದ್ದ. ಭಾರತೀಯ ಆಟಗಾರರ ನಡುವೆ ಇದ್ದ ಧೋನಿಯ ಕೈಕುಲುಕಲು ಬಂದಾಗ ಧೋನಿ ತಪ್ಪಿಸಿಕೊಂಡು ಅತ್ತಿತ್ತ ಓಡಿ ಆತನನ್ನು ಆಟ ಆಡಿಸಿದರು.
ಪಕ್ಕದಲ್ಲಿದ್ದ ಆಟಗಾರರು ಧೋನಿಯ ಈ ತಮಾಷೆ ಕಂಡು ನಗುತ್ತಿದ್ದರೆ, ಕೊನೆಗೂ ಅಭಿಮಾನಿಯ ಕೈಗೆ ಸಿಕ್ಕ ಧೋನಿ ಆತನ ಹೆಗಲು ತಟ್ಟಿ ಹೊರ ಕಳುಹಿಸಿದರು. ಸಮಾಧಾನಗೊಂಡ ಅಭಿಮಾನಿ ಕೊನೆಗೆ ಮೈದಾನದಿಂದ ಹೊರ ಹೋಗಿದ್ದಾನೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.