Publish Date: Tue, 05 Mar 2019 (09:21 IST)
Updated Date: Tue, 05 Mar 2019 (09:23 IST)
ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಗ್ಪುರದಲ್ಲಿ ಇಂದು ದ್ವಿತೀಯ ಏಕದಿನ ಪಂದ್ಯ ನಡೆಯಲಿದ್ದು, ಇಲ್ಲಿ ಧೋನಿಯ ಹಿಂದಿನ ದಾಖಲೆಗಳೇ ಎದುರಾಳಿಗಳ ಚಿಂತೆಗೆ ಕಾರಣವಾಗಿದೆ.
ನಾಗ್ಪುರದಲ್ಲಿ ಧೋನಿ ಇದುವರೆಗೆ 6 ಏಕದಿನ ಪಂದ್ಯವಾಡಿದ್ದು ಇದರಲ್ಲಿ 150.50 ಸರಾಸರಿಯಲ್ಲಿ 301 ರನ್ ಗಳಿಸಿದ್ದಾರೆ. ಭಾರತೀಯರ ಪೈಕಿ ಈ ಮೈದಾನದಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದು ಧೋನಿಯೇ.
ಮೊದಲ ಏಕದಿನ ಪಂದ್ಯದ ಗೆಲುವಿನ ರೂವಾರಿ ಧೋನಿಯಾಗಿದ್ದರು. ಇದೀಗ ದ್ವಿತೀಯ ಏಕದಿನ ಪಂದ್ಯ ಗೆಲ್ಲುವ ತವಕದಲ್ಲಿರುವ ಆಸೀಸ್ ಆಟಗಾರರಿಗೆ ಮತ್ತೆ ಧೋನಿಯೇ ಕಂಟಕವಾಗುವ ನಿರೀಕ್ಷೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.