ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಡೆಯಲು ಆಸೀಸ್ ಸ್ಪಿನ್ನರ್ ಆಡಂ ಝಂಪಾಗೆ ಸಹಾಯ ಮಾಡಿದ್ದು ಭಾರತೀಯನೇ!
ಹೌದು. ಭಾರತೀಯರಾಗಿರುವ ಶ್ರೀಧರನ್ ಶ್ರೀರಾಮ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಪಿನ್ ಬೌಲಿಂಗ್ ವಿಭಾಗಕ್ಕೆ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ನೀಡಿದ ಸಲಹೆಯನ್ನು ಪಾಲಿಸಿದ್ದಕ್ಕೇ ಆಡಂ ಝಂಪಾಗೆ ಕೊಹ್ಲಿ ವಿಕೆಟ್ ಕೀಳಲು ಸುಲಭವಾಗಿದೆ.
ಶ್ರೀಧರನ್ ನನ್ನ ಬೌಲಿಂಗ್ ಶೈಲಿಯನ್ನು ಬದಲಾಯಿಸಿದರು. ಇದರಿಂದಾಗಿಯೇ ನನಗೆ ಕೊಹ್ಲಿ ವಿಕೆಟ್ ಕೀಳಲು ಸಹಾಯವಾಯಿತು ಎಂದು ಝಂಪಾ ಹೇಳಿದ್ದಾರೆ. ಅಲ್ಲಿಗೆ, ಭಾರತೀಯ ನಾಯಕನ ವಿಕೆಟ್ ಪಡೆಯಲು ಭಾರತೀಯನೇ ಸಹಾಯ ಮಾಡಿದಂತಾಯಿತು!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.