Select Your Language

Notifications

webdunia
webdunia
webdunia
webdunia

ಮಾನಭಂಗ ಎಸಗುವವರಿಗೆ ನೈಜೀರಿಯಾದ ಈ ರಾಜ್ಯದಲ್ಲಿ ವಿಧಿಸುವ ಶಿಕ್ಷೆ ಕೇಳಿದ್ರೆ ಶಾಕ್ ಆಗ್ತೀರಿ!

ಮಾನಭಂಗ ಎಸಗುವವರಿಗೆ ನೈಜೀರಿಯಾದ ಈ ರಾಜ್ಯದಲ್ಲಿ  ವಿಧಿಸುವ ಶಿಕ್ಷೆ ಕೇಳಿದ್ರೆ ಶಾಕ್ ಆಗ್ತೀರಿ!
ನೈಜೀರಿಯಾ , ಭಾನುವಾರ, 20 ಸೆಪ್ಟಂಬರ್ 2020 (11:35 IST)
ನೈಜೀರಿಯಾ : ನೈಜೀರಿಯಾದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ತಕ್ಕ ಶಿಕ್ಷೆ ವಿಧಿಸಲು ಹೊಸ ಕಾನೂನೊಂದನ್ನು ಜಾರಿಗೆ ತರಲಾಗಿದೆ.

ಹೌದು. ಅತ್ಯಾಚಾರಿ ಪದೇ ಪದೇ ಈ ನೀಚ ಕೃತ್ಯವನ್ನು ಎಸಗುವ ಹಿನ್ನಲೆಯಲ್ಲಿ ಅವರು ಮತ್ತೆ ಲೈಂಗಿಕ ದೌರ್ಜನ್ಯ ಎಸಗಬಾರದೆಂದು ಅವರ ವೃಷಣಕ್ಕೆ ಕತ್ತರಿ ಹಾಕುವಂತ ಕಾನೂನು ನೈಜೀರಿಯಾದ ಕದುನಾ ಎಂಬ ರಾಜ್ಯದಲ್ಲಿ ಜಾರಿಗೆ ಬಂದಿದೆ. ಒಂದು ವೇಳೆ 14 ವರ್ಷದ ಒಳಗಿನವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಮರಣದಂಡನೆ ವಿಧಿಸಲಾಗುವುದು ಎನ್ನಲಾಗಿದೆ.

ನೈಜೀರಿಯಾದ ಕಡುನಾ ರಾಜ್ಯದ ರಾಜ್ಯಪಾಲ ನಾಸಿರ್ ಅಹ್ಮದ್ ಎಲ್-ರುಫಾಯಿ ಈ ನಿಯಮವನ್ನು ಜಾರಿಗೆ ತಂದಿದ್ದಾರೆ. ಈ ನಿಯಮ ನೈಜೀರಿಯಾದ ಎಲ್ಲಾ ರಾಜ್ಯಗಳಲ್ಲೂ ಜಾರಿಗೆ ಬರಬೇಕೆಂದು ಮಹಿಳಾ ಸಂಘಟನೆಗಳು ಆಗ್ರಹಿಸಿವೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಡುಪಿಯಲ್ಲಿ ಭಾರೀ ಮಳೆ; ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಂದ ಸೂಚನೆ