ಆಸ್ತಿಯನ್ನು ಮುಟ್ಟುಗೋಲು ಹಾಕುವ ಕುರಿತು ಮಲ್ಯ ಹೇಳಿದ್ದೇನು ಗೊತ್ತಾ?

ಸೋಮವಾರ, 9 ಜುಲೈ 2018 (19:48 IST)
ಇಂಗ್ಲೆಂಡ್ : ಲಂಡನ್ ನಲ್ಲಿರುವ ವಿಜಯ್ ಮಲ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಲು ಬ್ರಿಟನ್ ಕೋರ್ಟ್ ಭಾರತದ ಬ್ಯಾಂಕುಗಳಿಗೆ ಆದೇಶ ನೀಡಿರುವ ಹಿನ್ನಲೆಯಲ್ಲಿ ಇದೀಗ ಆ ಆಸ್ತಿಗಳು ತನ್ನ ಹೆಸರಿನಲ್ಲಿ ಇಲ್ಲ ಎಂಬ ವಿಚಾರವನ್ನು ಮದ್ಯದ ದೊರೆ ವಿಜಯ್ ಮಲ್ಯ ರವಿವಾರ  ತಿಳಿಸಿದ್ದಾರೆ.


ವಿಜಯ್ ಮಲ್ಯಾ ಭಾರತದ ವಿವಿಧ ಬ್ಯಾಂಕ್ ಗಳಿಂದ 9 ಸಾವಿರ ಕೋಟು ರೂ, ಸಾಲ ಪಡೆದು ಪಲಾಯನ ಮಾಡಿದ್ದರು. ಸಾಲ ವಸೂಲಾತಿಗಾಗಿ ಭಾರತದ 13 ಬ್ಯಾಂಕ್ ಗಳು ವಿಜಯ್ ಮಲ್ಯ ಅವರ ಲಂಡನ್ ನಲ್ಲಿರುವ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಬ್ರಿಟನ್ ಕೋರ್ಟ್ ನಲ್ಲಿ ಮನವಿ ಮಾಡಿದ್ದವು. ಭಾರತೀಯ ಬ್ಯಾಂಕ್ ಗಳ ಈ ಮನವಿಯನ್ನು  ಪುರಸ್ಕರಿಸಿ ವಿಚಾರಣೆ ನಡೆಸಿದ ಹೈಕೋರ್ಟ್ ಮಲ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಭ್ಯಂತರ ಇಲ್ಲ ಎಂದು ಆದೇಶ ನೀಡಿದೆ.


ಆದರೆ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಯ,’ ನ್ಯಾಯಾಲಯದ ಜಾರಿ ಅಧಿಕಾರಿಗಳು ಬ್ರಿಟನ್‌ನಲ್ಲಿರುವ ತನ್ನ ಸೊತ್ತುಗಳನ್ನು ವಶಪಡಿಸಿಕೊಳ್ಳಲು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ ಹಾಗೂ ಅದನ್ನು ಅಧಿಕಾರಿಗಳಿಗೆ ಹಸ್ತಾಂತರಿಸುತ್ತೇನೆ. ಆದರೆ, ಅಲ್ಲಿರುವ ಒಂದು ಐಷಾರಾಮಿ ಮನೆ ತನ್ನ ಮಕ್ಕಳ ಹೆಸರಲ್ಲಿದ್ದರೆ, ಇನ್ನೊಂದು ತಾಯಿಯ ಹೆಸರಲ್ಲಿ ಇದೆ. ಹಾಗಾಗಿ ಅವುಗಳ ಜಪ್ತಿಗೆ ಅನುಮತಿ ನೀಡಲು ನನಗೆ ಅಧಿಕಾರವಿಲ್ಲ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಜೆಪಿ ಚಾಣಕ್ಯ ಎಂದೇ ಕರೆಸಿಕೊಳ್ಳುವ ಅಮಿತ್ ಶಾ ಚಾಣಕ್ಯ ಎಂದಿದ್ದು ಯಾರಿಗೆ ಗೊತ್ತಾ?