Select Your Language

Notifications

webdunia
webdunia
webdunia
webdunia

10 ಬಾಟಲ್ ಬಿಯರ್ ಕುಡಿದು 18 ಗಂಟೆಗಳ ಕಾಲ ನಿದ್ದೆ ಮಾಡಿದ ವ್ಯಕ್ತಿಗೆ ಆಗಿದ್ದೇನು ಗೊತ್ತಾ?

10 ಬಾಟಲ್ ಬಿಯರ್ ಕುಡಿದು 18 ಗಂಟೆಗಳ ಕಾಲ ನಿದ್ದೆ ಮಾಡಿದ ವ್ಯಕ್ತಿಗೆ ಆಗಿದ್ದೇನು ಗೊತ್ತಾ?
ಚೀನಾ , ಮಂಗಳವಾರ, 23 ಜೂನ್ 2020 (07:36 IST)
Normal 0 false false false EN-US X-NONE X-NONE

ಚೀನಾ : ವ್ಯಕ್ತಿಯೊಬ್ಬ 10 ಬಾಟಲ್ ಬಿಯರ್ ಕುಡಿದು 18 ಗಂಟೆಗಳ ಕಾಲ ನಿದ್ದೆ ಮಾಡಿದ್ದಕ್ಕೆ ಆತನಿಗೆ ಆದ ಗತಿ ಕೇಳಿದರೆ ಶಾಕ್ ಆಗ್ತೀರಾ.

ಹೌದು. ಚೀನಾದ 40 ವರ್ಷದ ವ್ಯಕ್ತಿಯೊಬ್ಬ 10 ಬಾಟಲ್ ಬಿಯರ್ ಸೇವಿಸಿ ನಿದ್ರೆಗೆ ಜಾರಿದ್ದಾನೆ. ಆತ ಕುಡಿದ ಮಂಪರಿನಲ್ಲಿ 18 ಗಂಟೆಗಳ ಕಾಲ ನಿದ್ರೆ ಮಾಡಿದ್ದಾನೆ. ಇದರ ಪರಿಣಾಮ ಆತನ ಮೂತ್ರಕೋಶದಲ್ಲಿ ಮೂತ್ರ ಶೇಖರಣೆಯಾಗಿ ವಿಸರ್ಜನೆಯಾಗದ ಕಾರಣ ಮೂತ್ರಕೋಶಕ್ಕೆ ಒತ್ತಡ ಹೆಚ್ಚಾಗಿ ಅದು ಬ್ಲಾಸ್ಟ್ ಆಗಿದೆ.  

ನಿದ್ರೆಯಿಂದ ಎದ್ದ ಆತನಿಗೆ ತೀವ್ರವಾದ ಹೊಟ್ಟೆನೋವು ಶುರುವಾದ ಕಾರಣದಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಆತನ ಮೂತ್ರಕೋಶ ಮೂರು ಭಾಗವಾಗಿ ಚಿದ್ರಗೊಂಡಿದೆ. ಕೂಡಲೇ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಆತನ ಜೀವವನ್ನು ಉಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ತಿಂಗಳ ನಂತರ ಈ ಊರಲ್ಲಿ ಮತ್ತೆ ಬಂತು ಕೊರೊನಾ