Publish Date: Mon, 22 Jun 2020 (21:53 IST)
Updated Date: Mon, 22 Jun 2020 (21:54 IST)
ಬರೋಬ್ಬರಿ ಒಂದು ತಿಂಗಳ ಬಳಿಕ ಈ ಜಿಲ್ಲೆಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ.
ಕೊಡಗು ಜಿಲ್ಲೆಯಲ್ಲಿ ಒಂದು ತಿಂಗಳ ಬಳಿಕ ಕೋರೋನಾ ಸೋಂಕಿನ ಹೊಸ ಪ್ರಕರಣ ವರದಿಯಾಗಿದೆ. ಸೋಮವಾರ ಮೂರು ಪ್ರಕರಣ ವರದಿಯಾಗಿವೆ.
ಜಿಲ್ಲಾಧಿಕಾರಿ ಅನೀಸ್ ಕಣ್ಣಣಿ ಜಾಯ್ ಮಾತನಾಡಿ, ಶನಿವಾರಸಂತೆ ಬಳಿಯ ಶಿರಂಗಾಲ ಗ್ರಾಮದ ವ್ಯಕ್ತಿಯೋವ೯ರಿಗೆ ಸೋಂಕು ತಗುಲಿದ್ದು, ಅಂತರ್ ಜಿಲ್ಲಾ ಪ್ರಯಾಣ ಇತಿಹಾಸ ಹೊಂದಿದ್ದ. ಈ ಹಣ್ಣಿನ ವ್ಯಾಪಾರಿಯ ಸಂಪಕ೯ಗಳನ್ನು ಕಲೆ ಹಾಕಲಾಗುತ್ತಿದೆ.
ಮುಂಬೈನಿಂದ ಬಸ್ ಮೂಲಕ ಮಡಿಕೇರಿಗೆ ಬಂದ 25 ವಷ೯ದ ಉದ್ಯಮಿಯ ಜತೆ ಪ್ರಯಾಣಿಸಿದ್ದ ಬಸ್ ಪ್ರಯಾಣಿಕರ ಮಾಹಿತಿ ಕಲೆ ಹಾಕಲಾಗುತ್ತಿದೆ.
ಆಲೂರು ಸಿದ್ದಾಪುರ ಗ್ರಾಮದ ದೊಡ್ಡಳ್ಳಿಯ ಮಹಿಳೆಯೋವ೯ರಿಗೂ ಮುಂಬೈ ಮೂಲದಿಂದ ಸೋಂಕು ತಗುಲಿದೆ. ಇವರೆಲ್ಲರನ್ನೂ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.
Jagadeesh
Publish Date: Mon, 22 Jun 2020 (21:53 IST)
Updated Date: Mon, 22 Jun 2020 (21:54 IST)