Publish Date: Mon, 22 Jun 2020 (15:27 IST)
Updated Date: Mon, 22 Jun 2020 (15:28 IST)
ಮಾರಕ ಕೊರೊನಾ ವೈರಸ್ ಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಈ ಜಿಲ್ಲೆಯಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಬಳ್ಳಾರಿ ಜಿಲ್ಲೆಯಲ್ಲಿ ಮೂರಕ್ಕೇರಿದೆ. ಮೃತಪಟ್ಟ ವ್ಯಕ್ತಿ ಆಂಧ್ರ ಪ್ರದೇಶದ ಆದೋನಿಗೆ ಸೇರಿದ 62 ವರ್ಷದವರಾಗಿದ್ದಾರೆ. ಕೊರೊನಾ ಸೋಂಕಿನ ಜೊತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಆದೋನಿಯಿಂದ ಬಂದು ಆತ ಜೂನ್ 17 ರಂದು ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಆತನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆತನಿಗೆ ಸಕ್ಕರೆ ಕಾಯಿಲೆ, ಕಿಡ್ನಿ ಸೇರಿದಂತೆ ಬಹು ಅಂಗಾಂಗಗಳ ವಿಫಲತೆಯಿಂದ ಕೊನೆಯುಸಿರೆಳೆದಿದ್ದಾನೆ.
Jagadeesh
Publish Date: Mon, 22 Jun 2020 (15:27 IST)
Updated Date: Mon, 22 Jun 2020 (15:28 IST)