Select Your Language

Notifications

webdunia
webdunia
webdunia
Wednesday, 9 April 2025
webdunia

ಜಿಂದಾಲ್ ನಲ್ಲಿ ಡೆಡ್ಲಿ ಕೊರೊನಾ ಅಟ್ಟಹಾಸ

ಜಿಂದಾಲ್
ಬಳ್ಳಾರಿ , ಮಂಗಳವಾರ, 16 ಜೂನ್ 2020 (15:55 IST)
ಜಿಂದಾಲ್ ನಲ್ಲಿ ಡೆಡ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿಸಿದೆ.

ಬಳ್ಳಾರಿ ಜಿಲ್ಲೆಯ ಜಿಂದಾಲ್ ಕಂಪನಿಯ ನೌಕರರಲ್ಲಿ ಕೊರೊನಾ ವೈರಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಜಿಲ್ಲಾ ಹೆಲ್ತ್ ಬುಲೆಟಿನ್ ‌ನಲ್ಲಿ‌ ಪ್ರಕಟ ಮಾಡ್ತೇವೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.

ಜಿಂದಾಲ್ ನಲ್ಲಿ ಕೊರೋನಾ ಪಾಸಿಟಿವ್ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಯಲಿದೆ.
ಜಿಂದಾಲ್ ಆವರಣದಲ್ಲಿ ‌ಕೆಲಸ ಮಾಡೋರು ಹೊರಗೆ ಬರದಂತೆ ಇರೋಕೆ ವ್ಯವಸ್ಥೆ ಮಾಡಲು ಸೂಚನೆ ನೀಡಿದೆ.

ಬೇರೆ ಊರಿನಿಂದ ಜಿಂದಾಲ್ ಗೆ ಬರುವ ಸಿಬ್ಬಂದಿಗೆ ಸ್ವಲ್ಪ ತೊಂದರೆ ಆಗ್ತಿದೆ.‌ ಹೀಗಾಗಿ ಕೆಲಸ ಮಾಡಿ ಅವರು ಅಲ್ಲಿ ಉಳಿದರೆ ಒಳಿತು ಎಂದರು.

ಇನ್ನೂ ಕೆಲ ಕಡೆ ಜಿಂದಾಲ್ ನೌಕರರು ಗ್ರಾಮಕ್ಕೆ ಬಾರದಂತೆ ಜಿಂದಾಲ್ ಪಕ್ಕದ ಹಳ್ಳಿಗಳಲ್ಲಿ ಡಂಗೂರ ಸಾರುತ್ತಿರುವುದು ಗಮನಕ್ಕೆ ಬಂದಿದೆ. ಪಾಪಿನಾಯಕನಹಳ್ಳಿ ಗ್ರಾಮ ‌ಪಂಚಾಯ್ತಿ ಜಿಂದಾಲ್ ಗೆ ಹೋದ ಜನರನ್ನು ಗ್ರಾಮಕ್ಕೆ ಬರಬೇಡಿ ಎಂದು ಆದೇಶ ಹೊರಡಿಸಿದೆ. ಹೀಗಂತ ಆದೇಶ ಮಾಡುವ ಅಧಿಕಾರಿ ಗ್ರಾಪಂಗೆ ಇಲ್ಲ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಕಾಂಗ್ರೆಸ್ ಶಾಸಕನ ವಿರುದ್ಧ ಬಿತ್ತು ಕೇಸ್