Select Your Language

Notifications

webdunia
webdunia
webdunia
webdunia

ಪೊಲೀಸ್ ಕಾನ್ಸಟೇಬಲ್ ಗೆ ಕೊರೊನಾ ವೈರಸ್

ಪೊಲೀಸ್ ಕಾನ್ಸಟೇಬಲ್ ಗೆ ಕೊರೊನಾ ವೈರಸ್
ಹಾವೇರಿ , ಸೋಮವಾರ, 15 ಜೂನ್ 2020 (21:17 IST)
ಪೊಲೀಸ್ ಕಾನ್ಸಟೇಬಲ್ ವೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ.

ಹಾವೇರಿ ಜಿಲ್ಲೆಯಲ್ಲಿ ಪೊಲೀಸ್ ಪೇದೆ ಸೇರಿ ಮತ್ತಿಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಐದು ಪ್ರಕರಣಗಳು ಸಕ್ರಿಯವಾಗಿದ್ದು, ಈವರೆಗೆ 26 ವ್ಯಕ್ತಿಗಳಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 21 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ 41 ವರ್ಷದ (P-7030) ವ್ಯಕ್ತಿ ಹಾಗೂ ಗುತ್ತಲದ 9 ವರ್ಷದ (P-7031) ಬಾಲಕನಿಗೆ ಸೋಂಕು ದೃಢಗೊಂಡಿದೆ. ಈ ಬಾಲಕ P-5004 ರ ಪ್ರಾಥಮಿಕ ಸಂಪರ್ಕಿತನಾಗಿದ್ದಾನೆ. P-7030 ಸೋಂಕಿತ ಪೊಲೀಸ್ ಪೇದೆಯ ಸಂಪರ್ಕ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ. ಇಬ್ಬರನ್ನು ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಹಾನಗರ ಪಾಲಿಕೆಯಲ್ಲಿ ಗೋಲ್ ಮಾಲ್