Publish Date: Mon, 15 Jun 2020 (19:41 IST)
Updated Date: Mon, 15 Jun 2020 (19:43 IST)
ತಬ್ಲಿಘಿ ಬಳಿಕ ಮಹಾರಾಷ್ಟ್ರದಿಂದ ಬಂದವರಲ್ಲಿ ಹೆಚ್ಚಾಗಿ ಡೆಡ್ಲಿ ಕೊರೊನಾ ವೈರಸ್ ಕಂಡು ಬರುತ್ತಿದ್ದು, ಹೊಸದಾಗಿ 48 ಜನರಲ್ಲಿ ಕೋವಿಡ್ -19 ಪತ್ತೆಯಾಗಿದೆ.
ಮಹಾರಾಷ್ಟ್ರದಿಂದ ಕಲಬುರಗಿ ಜಿಲ್ಲೆಗೆ ಆಗಮಿಸಿದ ಹಾಗೂ ಹೊರ ದೇಶಗಳಿಂದ ಬಂದ 4 ಜನರು ಸೇರಿದಂತೆ 48 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.
ಈ ಮೂಲಕ ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 944 ಕ್ಕೆ ಏರಿಕೆಯಾದಂತಾಗಿದೆ. ಡೆಡ್ಲಿ ಕೊರೊನಾಗೆ ಈವರೆಗೆ 10 ಜನರು ಬಲಿಯಾಗಿದ್ದಾರೆ.
ಯುಎಇ ನಿಂದ ಬಂದ ಒಬ್ಬರು, ಡಿಯು ಡಮನ್ ನಿಂದ ಬಂದ ಮೂವರು ಹಾಗೂ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 39 ಜನರಲ್ಲಿ ಕೊರೊನಾ ವೈರಸ್ ದೃಢವಾಗಿದೆ.
ಇನ್ನು, ಕೊರೊನಾ ದಿಂದ ಚೇತರಿಸಿಕೊಂಡ 32 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.