Select Your Language

Notifications

webdunia
webdunia
webdunia
webdunia

ಈ ವಿಚಾರ ನಟಿಯ ಸಾವಿಗೆ ಕಾರಣವಾಯ್ತಾ?

ಈ ವಿಚಾರ ನಟಿಯ ಸಾವಿಗೆ ಕಾರಣವಾಯ್ತಾ?
ಟೋಕಿಯೊ , ಸೋಮವಾರ, 25 ಮೇ 2020 (09:10 IST)
ಟೋಕಿಯೊ : ಸಾಮಾಜಿಕ ಜಾಲತಾಣಗಳಲ್ಲಿ ತನ್ನ ನಡತೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಮನನೊಂದು ಜಪಾನಿಸ್ ನಟಿ ಹಾನಾ ಕಿಮುರಾ ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಈಕೆಗೆ 22 ವರ್ಷ ವಯಸ್ಸಾಗಿದ್ದು, ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುವ ಜಪಾನಿಸ್ ನ ಜಯಪ್ರಿಯ ವೆಬ್ ಸೀರೀಸ್ ‘ಟರೇಸ್ ಹೌಸ್’ ನಲ್ಲಿ ನಟಿಸುತ್ತಿದ್ದಳು. ಹಾಗೇ ಈಕೆ ವೃತ್ತಿಪರ ಕುಸ್ತಿಪಟು ಆಗಿದ್ದಳು. ಆದರೆ ಈಕೆ ಶನಿವಾರದಂದು ಸಾವನಪ್ಪಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತನ್ನ ನಡತೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.


ಈ ಪ್ರಕರಣವನ್ನು ಜಪಾನಿನ ಸೈಬರ್ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದು, ಈಗಾಗಲೇ ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಟೆಸ್ಟ್ ಮಾಡಿಸೋದಿಲ್ಲ ಎಂದವನ ಕಥೆ ಫಿನಿಷ್