ಕೊರೋನಾದಿಂದಾಗಿ ಆರ್ಥಿಕ ಹಿಂಜರಿತದಲ್ಲಿ ಜಗತ್ತು: 90 ದೇಶಗಳಿಂದ ಸಾಲಕ್ಕೆ ಬೇಡಿಕೆ!

ಶನಿವಾರ, 4 ಏಪ್ರಿಲ್ 2020 (11:15 IST)
ನವದೆಹಲಿ: ಕೊರೋನಾವೈರಸ್ ಕೇವಲ ಭಾರತ ಮಾತ್ರವಲ್ಲ, ಇಡೀ ಜಗತ್ತಿನ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಹಲವು ರಾಷ್ಟ್ರಗಳು ಆರ್ಥಿಕ ಹಿಂಜರಿತದತ್ತ ಕಾಲಿಟ್ಟಿವೆ.


ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಪ್ರಕಾರ 90 ದೇಶಗಳು ಆರ್ಥಿಕ ನೆರವು ನೀಡಲು ಬೇಡಿಕೆಯಿಟ್ಟಿವೆಯಂತೆ. ಇದುವರೆಗೆ ಕಾಣದಂತಹ ಆರ್ಥಿಕ ಹಿಂಜರಿತದತ್ತ ಜಗತ್ತು ಸಾಗಲಿದೆ ಎಂದು ಐಎಂಎಫ್ ಎಚ್ಚರಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯುಎಚ್ಒ ಜತೆ ಮಾಧ‍್ಯಮಗಳಿಗೆ ಹೇಳಿಕೆ ನೀಡಿರುವ ಐಎಂಎಫ್ ಆರ್ಥಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಭಾರೀ ಹಿಂಜರಿಕೆಯಾಗಿದ್ದು ಇದು ಜಗತ್ತಿನ ಎಲ್ಲಾ ರಾಷ್ಟ್ರಗಳ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ ಎಂದಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶಾಸಕ ರಾಮದಾಸ್ ಪ್ರಕಾರ ಪ್ರಧಾನಿ ಮೋದಿ ದೀಪ ಬೆಳಗಲು ಹೇಳಿರುವುದಕ್ಕೆ ಕಾರಣವೇನಂತೆ ಗೊತ್ತಾ?