Publish Date: Thu, 18 Jun 2020 (10:20 IST)
Updated Date: Thu, 18 Jun 2020 (10:23 IST)
ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರೊಂದಿಗೆ ಸಂಘರ್ಷಕ್ಕಿಳಿದು ವಿಶ್ವದಾದ್ಯಂತ ಟೀಕೆಗೊಳಗಾಗಿದ್ದರೂ ಚೀನಾಕ್ಕೆ ಬುದ್ಧಿ ಬಂದಂತಿಲ್ಲ.
ನಮ್ಮನ್ನು ಕೆಣಕಿದರೆ ನಾವು ಸುಮ್ಮನಿರಲ್ಲ ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ ಹೊರತಾಗಿಯೂ ಚೀನಾ ಗಾಲ್ವಾನ್ ಕಣಿವೆಯಲ್ಲಿ ತನ್ನ ಸೇನಾ ಸಂಖ್ಯೆ ಹೆಚ್ಚಿಸಿದ್ದಲ್ಲದೆ, ಶಸ್ತ್ರಾಸ್ತ್ರಗಳ ಸಂಗ್ರಹಣೆ ಕಾರ್ಯವನ್ನೂ ಮತ್ತಷ್ಟು ಹೆಚ್ಚಿಸಿದೆ.
ಈ ಹಿನ್ನಲೆಯಲ್ಲಿ ಭಾರತವೂ ಕಟ್ಟೆಚ್ಚರ ವಹಿಸಿದ್ದು, ಎಲ್ಲದಕ್ಕೂ ಸನ್ನದ್ಧವಾಗಿ ನಿಂತಿದೆ. ಒಂದು ರೀತಿಯಲ್ಲಿ ಗಡಿಯಲ್ಲಿ ಯುದ್ಧಕ್ಕೆ ಸನ್ನದ್ಧರಾಗುವ ರೀತಿಯಲ್ಲಿ ಭಾರತೀಯ ಸೇನೆ ತಯಾರಾಗಿ ನಿಂತಿದೆ ಎನ್ನಬಹುದು.