Select Your Language

Notifications

webdunia
webdunia
webdunia
Monday, 14 April 2025
webdunia

ಭಾರತ-ಚೀನಾ ಯೋಧರ ಕಾಳಗ: ಹುತಾತ್ಮ ಯೋಧರಿಗೆ ಸ್ಯಾಂಡಲ್ ವುಡ್ ನಟರ ನುಡಿ ನಮನ

ಭಾರತ-ಚೀನಾ
ಬೆಂಗಳೂರು , ಬುಧವಾರ, 17 ಜೂನ್ 2020 (09:35 IST)
ಬೆಂಗಳೂರು: ಗಲ್ವಾನ್ ವ್ಯಾಲಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಸ್ಯಾಂಡಲ್ ವುಡ್ ನಟ-ನಟಿಯರು ನುಡಿ ನಮನ ಸಲ್ಲಿಸಿದ್ದಾರೆ.


ಗುಲ್ವಾನ್ ಕಣಿವೆಯಲ್ಲಿ ನಿನ್ನೆ ರಾತ್ರಿ ಭಾರತ ಚೀನಾ ಸಂಘರ್ಷದಲ್ಲಿ ಹುತಾತ್ಮರಾದ ನಮ್ಮ ದೇಶದ 20 ಯೋಧರಿಗೆ ಭಾವಪೂರ್ಣ ನಮನಗಳು. ಯೋಧರ ಕುಟುಂಬಗಳಿಗೆ ದುಃಖ ತಡೆಯುವ ಶಕ್ತಿ ನೀಡಲಿ. ಭಾರತಾಂಬೆಯ ಮಡಿಲು ಸೇರಿದ ಎಲ್ಲಾ ಯೋಧರು ಮತ್ತೆ ಹುಟ್ಟಿ ಬರಲಿ ಎಂದು ಅನಿರುದ್ಧ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇನ್ನು ನವರಸನಾಯಕ ಜಗ್ಗೇಶ್ ಕೂಡಾ ಯೋಧರ ಬಗ್ಗೆ ಹೆಮ್ಮೆಯ ಮಾತನಾಡಿದ್ದು, 1962 ರ ಪರಿಸ್ಥಿತಿ ಇಂದಿಲ್ಲ. ಇಂದಿನ ಯೋಧರ ಶಕ್ತಿ, ಭಾರತದ ನೇತಾರರು ಬೇರೆಯೇ ಎಂದು ಚೀನಾಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಶಾಂತ್ ಸಿಂಗ್ ರಜಪೂತ್ ತೀರಿಕೊಂಡ ಸುದ್ದಿ ಕೇಳಿ ಅತೀ ಹೆಚ್ಚು ದುಃಖಿಸಿದ್ದ ಮಾಜಿ ಗೆಳತಿ