Select Your Language

Notifications

webdunia
webdunia
webdunia
webdunia

ಭಾರತ-ಚೀನಾ ಸೇನೆಯ ಬಲಾಬಲ ಹೇಗಿದೆ ಗೊತ್ತಾ?

ಭಾರತ-ಚೀನಾ ಸೇನೆಯ ಬಲಾಬಲ ಹೇಗಿದೆ ಗೊತ್ತಾ?
ನವದೆಹಲಿ , ಬುಧವಾರ, 17 ಜೂನ್ 2020 (09:05 IST)
ನವದೆಹಲಿ: ಭಾರತ ಮತ್ತು ಚೀನಾ ಸೇನೆ ನಡುವಿನ ಸಂಘರ್ಷ ತಾರಕ್ಕೇರಿದ ಹಿನ್ನಲೆಯಲ್ಲಿ ಈಗ ಉಭಯ ದೇಶಗಳ ನಡುವಿನ ಸೇನಾ ಬಲಾಬಲ ಹೇಗಿದೆ ಎಂದು ನೋಡೋಣ.


ಸೈನಿಕರ ಸಂಖ್ಯೆಗೆ ಹೋಲಿಸಿದರೆ ಭಾರತವೇ ಮೇಲುಗೈ ಹೊಂದಿದೆ. ಭಾರತದ ಬಳಿ ಜವಾನರ ಸಂಖ್ಯೆ 3,462,500 ಇದ್ದರೆ ಚೀನಾ 2,693,000 ಸೈನಿಕರಿದ್ದಾರೆ. ಆದರೆ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಇತ್ಯಾದಿ ಯುದ್ಧ ಪರಿಕರಗಳ ವಿಚಾರದಲ್ಲಿ ಚೀನಾ ಸೇನೆ ಭಾರತಕ್ಕಿಂತ ಮುಂದಿದೆ.

ಒಟ್ಟು ಯುದ್ಧ ವಿಮಾನಗಳು ಭಾರತದ ಬಳಿ 2,082 ಮತ್ತು ಚೀನಾ ಬಳಿ 3,187 ಇದ್ದರೆ, ಟ್ಯಾಂಕರ್ ಗಳು ಭಾರತದ ಬಳಿ 4,184 ಮತ್ತು ಚೀನಾ ಬಳಿ 13,050 ಇವೆ. ಸಬ್ ಮೆರಿನ್ ಗಳ ಸಂಖ್ಯೆಯಲ್ಲೂ ಚೀನಾ ತುಂಬಾ ಮುಂದಿದೆ. ಭಾರತದ ಬಳಿಕ ಕೇವಲ 16 ಇದ್ದರೆ ಚೀನಾ ಬಳಿ 76 ರಷ್ಟಿವೆ. ಭಾರತದ ಬಳಿ 295 ಮತ್ತು 714 ನೌಕಾಪಡೆಗೆ ಸಂಬಂಧಿಸಿದ ಶಸ್ತ್ರಾಸ್ತ್ರಗಳಿವೆ. ಹೀಗಾಗಿ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಚೀನಾ ಪ್ರಬಲ ವಿರೋಧಿಯಾಗಿದೆ. ಹೀಗಾಗಿ ಭಾರತ ಎಚ್ಚರಿಕೆಯ ಹೆಜ್ಜೆಯಿಡಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊರ ರಾಜ್ಯಗಳಿಗೆ ಕಬ್ಬು ಕಳಿಸದಂತೆ ಡಿಸಿ ಎಚ್ಚರಿಕೆ