Select Your Language

Notifications

webdunia
webdunia
webdunia
webdunia

ಅತ್ತ ಮಾತುಕತೆ ಪ್ರಸ್ತಾಪವಿಟ್ಟು ಭಾರತೀಯರ ಮೇಲೆ ಗುಂಡಿನ ಮಳೆಗೆರೆದ ನೇಪಾಳ

ಅತ್ತ ಮಾತುಕತೆ ಪ್ರಸ್ತಾಪವಿಟ್ಟು ಭಾರತೀಯರ ಮೇಲೆ ಗುಂಡಿನ ಮಳೆಗೆರೆದ ನೇಪಾಳ
ನವದೆಹಲಿ , ಶನಿವಾರ, 13 ಜೂನ್ 2020 (09:25 IST)
ನವದೆಹಲಿ: ಗಡಿಯಲ್ಲಿ ಭಾರತದ ನೆರೆಯ ರಾಷ್ಟ್ರ ನೇಪಾಳದ ತಂಟೆ ಮಿತಿಮೀರಿದೆ. ನಕ್ಷೆ ಬದಲಾವಣೆ ವಿಚಾರದಲ್ಲಿ ಭಾರತದೊಂದಿಗೆ ಕಿರಿಕ್ ಮಾಡಿಕೊಂಡಿರುವ ನೇಪಾಳ ಭಾರತೀಯರ ಮೇಲೆ ಗುಂಡಿನ ಮಳೆಗೆರೆದು ವಿವಾದದ ಬೆಂಕಿಗೆ ತುಪ್ಪ ಸುರಿದಿದೆ.


ನಿನ್ನೆ ಬೆಳಿಗ್ಗೆಯಷ್ಟೇ ಚೀನಾ-ಭಾರತ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದಾದರೆ ನಮಗೆ ಯಾಕೆ ಸಾಧ‍್ಯವಿಲ್ಲ ಎಂದಿತ್ತು. ಆದರೆ ಇದರ ನಡುವೆ ಇಂತಹದ್ದೊಂದು ಘಟನೆ ನಡೆದಿರುವುದು ಉದ್ವಿಗ್ನ ಪರಿಸ್ಥಿತಿ ಹೆಚ್ಚಲು ಕಾರಣವಾಗಿದೆ.

ಈ ಘಟನೆ ನಡೆದಿರುವುದು ನೇಪಾಳದ ಗಡಿಯೊಳಗೆ. ನೇಪಾಳದತ್ತ ಸಾಗುತ್ತಿದ್ದ ಮೂವರು ಭಾರತೀಯರ ಮೇಲೆ ಗನ್ ತೋರಿಸಿ ಅಲ್ಲಿನ ಪೊಲೀಸರು ಹಿಂತಿರುಗುವಂತೆ ಸೂಚಿಸುತ್ತಾರೆ. ಅಲ್ಲದೆ, ಗುಂಡು ಹಾರಿಸಿ ಬೆದರಿಸುತ್ತಾರೆ. ಈ ವೇಳೆ ಇಬ್ಬರಿಗೆ ಗಾಯವಾದರೆ, ಇನ್ನೋರ್ವ ಗಂಭೀರ ಗಾಯದಿಂದಾಗಿ ಸಾವನ್ನಪ್ಪುತ್ತಾನೆ. ಇದೀಗ ಉಳಿದಿಬ್ಬರನ್ನು ನೇಪಾಳ ಪೊಲೀಸರು ತಮ್ಮ ವಶದಲ್ಲಿಟ್ಟುಕೊಂಡಿದ್ದು, ಇವರ ಬಿಡುಗಡೆಯಾಗಿ ಬಿಹಾರ ಪೊಲೀಸರು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಕೊರೊನಾ ಸ್ಫೋಟ; ಸೋಂಕಿತರ ಸಂಖ್ಯೆ 36,824ಕ್ಕೇರಿಕೆ