Publish Date: Mon, 06 Mar 2023 (12:13 IST)
Updated Date: Mon, 06 Mar 2023 (14:15 IST)
ವಾಷಿಂಗ್ಟನ್ : ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್ಫಾರ್ಮ್ ಜೂಮ್ ತನ್ನ ಅಧ್ಯಕ್ಷ ಗ್ರೆಗ್ ಟಾಂಬ್ ಅವರನ್ನು ವಜಾಗೊಳಿಸಿದೆ.
ಟಾಂಬ್ 2022ರ ಜೂನ್ ತಿಂಗಳಿನಲ್ಲಿ ಜೂಮ್ಗೆ ಸೇರ್ಪಡೆಯಾಗಿದ್ದರು. ಇತ್ತೀಚೆಗಷ್ಟೇ ಕಂಪನಿ ತನ್ನ 1,300 ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಇದರ ಬೆನ್ನಲ್ಲೇ ಕಂಪನಿ 10 ತಿಂಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೇರಿದ್ದ ಟಾಂಬ್ರನ್ನು ಹಠಾತ್ತನೆ ವಜಾಗೊಳಿಸಿದೆ. ಇದೀಗ ಜೂಮ್ನ ಮುಂದಿನ ಅಧ್ಯಕ್ಷ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಕಳೆದ ತಿಂಗಳು ಕಂಪನಿ ತನ್ನ ಶೇ.15ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಇದರ ಪ್ರಕಾರ, ಕಂಪನಿಯ ಸುಮಾರು 1,300 ಉದ್ಯೋಗಿಗಳನ್ನು ಜೂಮ್ ಇತ್ತೀಚೆಗೆ ವಜಾಗೊಳಿಸಿದೆ.